Breaking News
Home / ರಾಜಕೀಯ / “ಅವನು ಜೈಲಿನೊಳಗೆ ಇದ್ದಾನೆ, ನೀನು ಹೊರಗೆ ಇದ್ದೀಯ ಅಷ್ಟೇ”; ಮತ್ತೆ ಕಿಚ್ಚನ ವಿರುದ್ಧ ತಿರುಗಿಬಿದ್ದ ಅಹೋರಾತ್ರ

“ಅವನು ಜೈಲಿನೊಳಗೆ ಇದ್ದಾನೆ, ನೀನು ಹೊರಗೆ ಇದ್ದೀಯ ಅಷ್ಟೇ”; ಮತ್ತೆ ಕಿಚ್ಚನ ವಿರುದ್ಧ ತಿರುಗಿಬಿದ್ದ ಅಹೋರಾತ್ರ

Spread the love

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ದೇಶಾದ್ಯಂತ ಈ ಕೊಲೆ ಬಗ್ಗೆನೇ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ ಮೌನ ಮುರಿದಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು.

ಈ ಹೇಳಿಕೆ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕಿಚ್ಚ ಸುದೀಪ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಹೋರಾತ್ರ ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. ವಿಡಿಯೋ ಮಾಡಿ ಈ ಹಿಂದೆ ಸುದೀಪ್ ಅಭಿಮಾನಿಗಳು ಅವರ ಮೇಲೆ ಹಲ್ಲೆ ಮಾಡಿದ್ದನ್ನು ನೆನಪಿಸಿಕೊಂಡು ಕಿಡಿಕಾರಿದ್ದಾರೆ. ಮತ್ತೆ ಕಿಚ್ಚ ಸುದೀಪ್ ಅನ್ನು ಟಾರ್ಗೆಟ್ ಮಾಡಿ ವಿಡಿಯೋ ಮಾಡಿದ್ದಾರೆ.

"ಅವನು ಜೈಲಿನೊಳಗೆ ಇದ್ದಾನೆ, ನೀನು ಹೊರಗೆ ಇದ್ದೀಯ ಅಷ್ಟೇ"; ಮತ್ತೆ ಕಿಚ್ಚನ ವಿರುದ್ಧ ತಿರುಗಿಬಿದ್ದ ಅಹೋರಾತ್ರ

ಈ ಹಿಂದೆ ಕಿಚ್ಚ ಸುದೀಪ್ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದನ್ನು ಖಂಡಿಸಿ ಅಹೋರಾತ್ರ ವಿಡಿಯೋ ಮಾಡಿದ್ದರು. ಆ ವೇಳೆ ಕಿಚ್ಚ ಸುದೀಪ್ ಅಭಿಮಾನಿಗಳು ಕಿಡಿಕಾರಿದ್ದರು. ಅಷ್ಟೇ ಅಲ್ಲದೆ ಅಹೋರಾತ್ರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಂತಹ ಸಂದರ್ಭದಲ್ಲೂ ಅಹೋರಾತ್ರ ಫೇಸ್‌ಬುಕ್ ಲೈವ್ ಮಾಡಿದ್ದರು. ಈಗ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲು ಎಂದಿರುವ ಕಿಚ್ಚನ ವಿರುದ್ಧ ಅಹೋರಾತ್ರ ಮತ್ತೆ ಕಿಡಿಕಾರಿದ್ದಾರೆ.

ಕಿಚ್ಚನ ಅಭಿಮಾನಿಗಳು ಅಹೋರಾತ್ರ ನುಗ್ಗಿ ಗಲಾಟೆ ಮಾಡಿದ್ದನ್ನು ಇನ್ನೂ ಮರೆತಿಲ್ಲ. ಸುದೀಪ್ ಮೇಲಿನ ಕೋಪ ಇನ್ನೂ ಕಡಿಮೆ ಆಗಿಲ್ಲ. ಹೀಗಾಗಿ ಮತ್ತೆ ಕಿಚ್ಚನ ವಿರುದ್ಧ ತಿರುಗಿಬಿದ್ದಿದ್ದಾರೆ. ನೈತಿಕತೆ ಇದ್ದರೆ ಪೊಲೀಸರ ಮುಂದೆ ಶರಣಾಗುವಂತೆ ಕೇಳಿಕೊಂಡಿದ್ದಾರೆ. “ನೀನು ನೈತಿಕತೆ ಇರುವವನಾದರೆ, ಮೊದಲು ಪೊಲೀಸರಿಗೆ ಹೋಗಿ ಸರೆಂಡರ್ ಆಗು. ನಿನ್ನ ಹಿಂದೆ ಓಡಾಡಿಸಿಕೊಳ್ಳುತ್ತಿರುವ ನವೀನ್ ಗೌಡ ತಂಡ, ಜಾಕ್ ಮಂಜ ಎಲ್ಲರೂ ಸೇರಿಕೊಂಡು ನಿನ್ನ ಆಜ್ಞೆ ಇಲ್ಲದೆ ಏನೂ ಮಾಡದೆ ಇರೋರು, ಇದೇ ರೀತಿ ಅಹೋರಾತ್ರನ ಮೇಲೆ ಹತ್ಯೆಗೆ ಸಂಚು ಮಾಡಿದ್ದರು.” ಎಂದಿದ್ದಾರೆ.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ