Breaking News
Home / ರಾಜಕೀಯ / ಹೊಲಗಳತ್ತ ಮುಖ ಮಾಡಿದ ಅನ್ನದಾತ: ಬಿತ್ತನೆ ಕಾರ್ಯ ಚುರುಕು

ಹೊಲಗಳತ್ತ ಮುಖ ಮಾಡಿದ ಅನ್ನದಾತ: ಬಿತ್ತನೆ ಕಾರ್ಯ ಚುರುಕು

Spread the love

ಮುದ್ದೇಬಿಹಾಳ: ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧ ಮಾಡಿಕೊಂಡ ಕೃಷಿಪರಿಕರಗಳೊಂದಿಗೆ ಹೊಲಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ತೊಗರಿ, ಹೆಸರು, ಸಜ್ಜೆ,ಹ ತ್ತಿ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.ಉತ್ತಮ ಮಳೆ | ಹೊಲಗಳತ್ತ ಮುಖ ಮಾಡಿದ ಅನ್ನದಾತ: ಬಿತ್ತನೆ ಕಾರ್ಯ ಚುರುಕು

ಕೃಷಿ ಇಲಾಖೆಯಿಂದ ಈಗಾಗಲೇ ಮುದ್ದೇಬಿಹಾಳ, ಢವಳಗಿ, ನಾಲತವಾಡ ಹೋಬಳಿ ವ್ಯಾಪ್ತಿಯ ರೈತರಿಗೆ ತೊಗರಿ, ಹೆಸರು ಬೀಜಗಳನ್ನು ವಿತರಣೆ ಮಾಡಿದೆ. ಅದರಲ್ಲಿ ಮುಸುಕಿನ ಜೋಳ, ಬಿಜಿಎಸ್-9 ಹೆಸರು, ಟಿಎಸ್‌ಆರ್3ಆರ್ ತೊಗರಿ ಬೀಜಗಳನ್ನು ವಿತರಣೆ ಮಾಡಲಾಗಿದೆ.

ಮುದ್ದೇಬಿಹಾಳ ತಾಲ್ಲೂಕಿನ ಮೂರು ಹೋಬಳಿ ವ್ಯಾಪ್ತಿಯನ್ನು ಒಳಗೊಂಡ ಒಟ್ಟು 16,772 ಹೆಕ್ಟೇರ್ ಪ್ರದೇಶ ನೀರಾವರಿ ಇದ್ದು 39,939 ಹೆಕ್ಟೇರ್ ಶೇ 10ರಷ್ಟು ಪ್ರಮಾಣದಲ್ಲಿ ಬಿತ್ತನೆ ಆಗಿದೆ.

ಮಳೆ ಮಾಹಿತಿ: ಪ್ರಸಕ್ತ ಸಾಲಿನ ಮಳೆ ಮಾಪನ ಕೇಂದ್ರದಲ್ಲಿ ಮೇ 31ರ ವರೆಗೆ ದಾಖಲಾದ ಮಳೆ ಪ್ರಮಾಣ. 9.2 ಸೆಂ.ಮೀ ಮಳೆ ಆಗಬೇಕಿದ್ದು, ಜ.1ರಿಂದ ಮೇ 31ರ ವರೆಗೆ 6.71 ಸೆಂ.ಮೀ ಮಳೆ ಆಗಿದೆ. ಜೂನ್ 7ರಂದು ಮುದ್ದೇಬಿಹಾಳ 4.5 ಸೆಂ.ಮೀ, ನಾಲತವಾಡ 1.78 ಸೆಂ.ಮೀ, ಢವಳಗಿ 5.24 ಸೆಂ.ಮೀ, ಜೂ.8ರಂದು ಢವಳಗಿ 1 ಸೆಂ.ಮೀ, ಜೂ.9ರಂದು ಮುದ್ದೇಬಿಹಾಳ 4.8 ಸೆಂ.ಮೀ, ನಾಲತವಾಡ 8.2 ಸೆಂ.ಮೀ, ಢವಳಗಿ 5.21 ಸೆಂ.ಮೀ, ಜೂ.10ರಂದು ಮುದ್ದೇಬಿಹಾಳ 3.6 ಸೆಂ.ಮೀ, ನಾಲತವಾಡ 2.32 ಸೆಂ.ಮೀ, ಢವಳಗಿ 1.2 ಸೆಂ.ಮೀ ಮಳೆಯಾಗಿದ್ದು, ಜೂನ್ ತಿಂಗಳ ಆರಂಭದಲ್ಲಿ ಬರುವ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದು, ಇದರಿಂದ ರೈತರು ಜಮೀನುಗಳಿಗೆ ತೆರಳಿ ಬಿತ್ತನೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ