ಶಾರ್ಟ್ ಸರ್ಕ್ಯೂಟ್’ ನಿಂದ ಹೊತ್ತಿ ಉರಿದ ಮನೆಗಳು : ಮದುವೆಗೆಂದು ತಂದಿಟ್ಟಿದ್ದ 6 ಲಕ್ಷ ನಗದು ಭಸ್ಮ!
ಬೆಳಗಾವಿ : ಶಾರ್ಟ್ ಸರ್ಕ್ಯೂಟ್ ನಿಂದ ಅಕ್ಕ ಪಕ್ಕದಲ್ಲಿ ಇದ್ದಂತಹ ಎರಡು ಮನೆಗಳು ಸುಟ್ಟು ಭಸ್ಮವಾಗಿದ್ದು ಮದುವೆಗೆ ಎಂದು ತಂದಿಟ್ಟದ 6 ಲಕ್ಷ ರೂಪಾಯಿ ನಗದು ಹಣ ಕೂಡ ಈ ವೇಳೆ ಸುಟ್ಟು ಬೂದಿಯಾಗಿರುವ ಘಟನೆ ಇಂದು ಬೆಳಗಾವಿಯ ಹೊಸೂರ ಹರಿಜನ ಗಲ್ಲಿಯಲ್ಲಿ ನಡೆದಿದೆ.
ಹೌದು ಬೆಳಗಾವಿಯ ಶಿವರಾಜ್ ಹೊಸೂರ ಹರಿಜನ ಗಲ್ಲಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅಶೋಕ್ ಮೊದಗೆ ಹಾಗೂ ಶಶಿಕಾಂತ ಮೊದಗೆ ಎಂಬುವವರಿಗೆ ಸೇರಿದ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಶಿವರಾಜ್ ಮೊದಗೆ ಮದುವೆ ಕಾರ್ಯಕ್ಕೆಂದು ದುಡ್ಡು ಮನೆಯಲ್ಲಿಟ್ಟಿದ್ದರು.
ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಮನೆ ಸದಸ್ಯರು ಮನೆಯಿಂದ ಹೊರ ಓಡಿ ಬಂದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಯ ಪರಿಕರ ಹಾಗೂ ವಸ್ತುಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿರುವ ಕಾರ್ಯ ನಡೆದಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.