Breaking News
Home / ರಾಜಕೀಯ / ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನಕ್ಕೆ ಕುಟುಂಬದವರ ಹೇಳಿಕೆ

ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನಕ್ಕೆ ಕುಟುಂಬದವರ ಹೇಳಿಕೆ

Spread the love

ಎಷ್ಟೇ ದಿನವಾದ್ರೂ ಶವ ಎತ್ತಲ್ಲ’: ದರ್ಶನ್​ ಸಹಚರ ಅನು ತಂದೆ ನಿಧನಕ್ಕೆ ಕುಟುಂಬದವರ ಹೇಳಿಕೆ

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ಅನೇಕರು ಅರೆಸ್ಟ್​ ಆಗಿದ್ದಾರೆ.

ಚಿತ್ರದುರ್ಗದ ಅನುಕುಮಾರ್​ ಅಲಿಯಾಸ್​ ಅನು ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 

ಇದರಿಂದ ಮನನೊಂದಿರುವ ಅನು ತಂದೆ ಚಂದ್ರಣ್ಣ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ.

ಘಟನೆಯ ಕುರಿತಂತೆ ಅನು ಕುಟುಂಬದವರು ಪ್ರತಿಕ್ರಿಯೆ ನೀಡಿದ್ದಾರೆ. ‘ಮಗ ಅರೆಸ್ಟ್​ ಆಗಿದ್ದಕ್ಕೆ ತಂದೆಗೆ ಈ ರೀತಿ ಆಗಿದೆ. ಮಗನನ್ನು ಕರೆಸಬೇಕು.

 

ಅವನು ಇಲ್ಲದೇ ಮಣ್ಣಾಗೋಕೆ ಆಗಲ್ಲ. ಎಷ್ಟೇ ದಿನ ಆದರೂ ಇಲ್ಲೇ ಇಡುತ್ತೇವೆ. ಅನು ಬರುವವರೆಗೂ ಶವ ಎತ್ತಲ್ಲ. ಇಷ್ಟು ದಿನ ಜೊತೆಗಿದ್ದ ತಂದೆಯ ಶವ ಆತ ನೋಡದೇ ಇರೋಕೆ ಆಗಲ್ಲ’ ಎಂದು ಅನು ಸಂಬಂಧಿಕರು ಹೇಳಿದ್ದಾರೆ. 

ದರ್ಶನ್​ (Darshan) ಹಾಗೂ ಸಹಚರರ ಜೊತೆ ಅನು ಕೂಡ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದಾನೆ. ಈ ಕೇಸ್​ನ ತನಿಖೆ ತೀವ್ರಗೊಂಡಿದೆ.


Spread the love

About Laxminews 24x7

Check Also

ಓಂ ಬಿರ್ಲಾ ಮತ್ತೊಂದು ಬಾರಿಗೆ ಲೋಕಸಭೆ ಸ್ಪೀಕರ್..?

Spread the love ನವದೆಹಲಿ,ಜೂ.18- ಎನ್‌ಡಿಎ-3ನೇ ಮೈತ್ರಿ ಸರ್ಕಾರದಲ್ಲಿ ಲೋಕಸಭೆಯ ಸ್ಪೀಕರ್‌ ಸ್ಥಾನವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆಯಿದ್ದು, ಹಿಂದಿನ ಸರ್ಕಾರದಲ್ಲಿ ಲೋಕಸಭಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ