Breaking News
Home / ರಾಜಕೀಯ / ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

Spread the love

ಬೆಂಗಳೂರು: ಕೋಳಿಯನ್ನು ಎತ್ತಿ ಎಸೆಯುವಂತೆ ದರ್ಶನ್‌ ರೇಣುಕಾ ಸ್ವಾಮಿಯನ್ನು ಎಸೆದಿದ್ದಾನೆಂದು ಪೊಲೀಸ್‌ ಅಧಿಕಾರಿ ಹಾಗೂ ವ್ಯಕ್ತಿಯೊಬ್ಬರು ನಡೆಸಿದ್ದಾರೆ ಎನ್ನಲಾದ ಮೊಬೈಲ್‌ ಸಂಭಾಷಣೆ ಭಾರೀ ವೈರಲ್‌ ಆಗಿದೆ.

ರೇಣುಕಾ ಸ್ವಾಮಿಯನ್ನು ಸಿಕ್ಕಾಪಟ್ಟೆ ಚಿತ್ರಹಿಂಸೆ ಕೊಟ್ಟು ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ಕೃತ್ಯದ ಬಗೆಗಿನ ಆಘಾತಕಾರಿ ಅಂಶಗಳನ್ನು ಪೊಲೀಸ್‌ ಅಧಿಕಾರಿ ಎನ್ನಲಾದ ವ್ಯಕ್ತಿ ತನ್ನ ಸ್ನೇಹಿತನಿಗೆ ವಿವರಿಸಿದ್ದಾನೆ.

ಜತೆಗೆ ದರ್ಶನ್‌ ಮತ್ತವರ ತಂಡ ರೇಣುಕಾ ಸ್ವಾಮಿಯನ್ನು ಅದೆಷ್ಟು ಕ್ರೂರವಾಗಿ ಕೊಂದಿದ್ದಾರೆ ಎಂಬುದನ್ನೂ ಬಿಚ್ಚಿಟ್ಟಿದ್ದಾರೆ. ಮೊಬೈಲ್‌ ಸಂಭಾಷಣೆಯಲ್ಲಿ ಏನಿದೆ? ಪೊಲೀಸ್‌ ಎನ್ನಲಾದ ವ್ಯಕ್ತಿ ತನ್ನ ಸ್ನೇಹಿತನ ಜತೆ ನಡೆಸಿರುವ ಮೊಬೈಲ್‌ ಸಂಭಾಷಣೆಯ ವಿವರ.ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಪೊಲೀಸ್‌ ಅಧಿಕಾರಿ: 302 ಕೇಸ್‌ನಲ್ಲಿ ಹೆಸರು ತರಬೇಕಾದರೆ ಸುಮ್ಮನೆ ತರುವುದಿಲ್ಲ. ಲೈಫ್ ಅಲ್ವ. (ರೇಣುಕಾ ಸ್ವಾಮಿಯನ್ನು) ಸುಮ್ಮನೆ ವಾರ್ನಿಂಗ್‌ ಮಾಡಿ ಬಿಟ್ಟು ಕಳುಹಿಸಬಹುದಿತ್ತು.
ಸ್ನೇಹಿತ: ಹುಡುಗರು ಮಾಡಿದ್ದು ಅಂತಾರೆ ನಿಜಾನಾ?
ಪೊ: ಎಲ್ಲರೂ ಸೇರಿ ಹೊಡೆದಿರುವುದು, ಕಬ್ಬಿಣ ಕಾಯಿಸಿ ಬರೆ ಎಲ್ಲ ಹಾಕಿದ್ದಾರಲ್ಲ. ಸ್ಥಳದಲ್ಲಿದ್ದ ಸೀಜ್‌ ಮಾಡಿದ ಲಾರಿಗೆ ಆ ಚಿಕ್ಕ ಹುಡುಗನನ್ನು ಕೋಳಿ ಎತ್ತಿ ಎಸೆಯುವಂತೆ ಎಸೆಯುತ್ತಾನೆ ದರ್ಶನ್‌.
ಸ್ನೇ: ಹಲ್ಲೆ ಮಾಡುವ ವೀಡಿಯೋ ಇದೆಯಾ?
ಪೊ: ಹಾಂ, ಎಲ್ಲ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಇಲ್ಲಾಂದ್ರೆ ಸುಮ್ನೆ ಆಗುತ್ತಾ. ಅವನನ್ನು ಅರೆಸ್ಟ್‌ ಮಾಡದಂತೆ ಸಿಪಿ ಸಾಹೇಬ್ರಿಗೆ (ಪೊಲೀಸ್‌ ಆಯುಕ್ತರು) ಎಲ್ಲ ಕಡೆಯಿಂದ ಒತ್ತಡಗಳು ಬರಲಾರಂಭಿಸಿವೆ. ಇದ್ಯಾವುದಕ್ಕೂ ಜಗ್ಗಿಲ್ಲ. ಇಲ್ಲಿ ರಾಜಕೀಯ ಮಾಡಲಿಲ್ಲ. ಸೀದಾ ಎತ್ತಾಕ್ಕೊಂಡು ಬಂದಿದ್ದೆ. ಇವತ್ತಿನಿಂದ ಮಹಜರು ಎಲ್ಲ ಮಾಡಬೇಕು. ಸಿಕ್ಕಾಪಟೆ ಟಾರ್ಚರ್‌ ಕೊಟ್ಟಿದ್ದಾರೆ. ರಾಡ್‌ಗಳಲ್ಲಿ ಹೊಡೆದಿದ್ದಾರೆ. ಆ ಬೌನ್ಸರ್‌ಗಳು ಹೊಡೆದರೆ ತಡೆಯೋಕ್ಕಾಗುತ್ತಾ ಆ ಚಿಕ್ಕ ಹುಡುಗ. ಎಲ್ಲ ಕುಡಿದು ಬಂದು ಮಾಡಿದ್ದಾರೆ. ಸುಮ್ನೆ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ರೆ ಮುಗೀತಿತ್ತಪ್ಪ. 13 ಮಂದಿ ಮಾಡಿದ್ದಾರಲ್ಲ. ಬೇಲ್‌ ಸಿಗೋದು ತುಂಬ ಕಷ್ಟ. 1 ವರ್ಷ ಎಳೆದುಕೊಂಡು ಹೋಗಬಹುದು. 6 ತಿಂಗಳು ಹೊರಗೆ ಬರುವುದಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗ್ಬೇಕು ಇವ್ನು. ಪೋಸ್ಟ್‌ ಮಾರ್ಟಂನಲ್ಲಿ ಎಷ್ಟು ಭೀಕರವಾಗಿದೆ ಗೊತ್ತಾ?
ಸ್ನೇ: ತ್ರೋಟ್‌, ನೋಸ್‌ ಕಟ್ಟಾಗಿದೆ. ಅಷ್ಟೊಂದು ಸಿಟ್ಟು ಏನಕ್ಕೆ ಗೊತ್ತಾಗಿಲ್ಲಪ್ಪ?
ಪೊ: ಅವ್ನು (ದರ್ಶನ್‌) ರೂಡ್‌ ಬಾಸು. ಕುಡಿದು ಬಿಟ್ಟರೆ ನಡಿಯಕ್ಕೆ ಆಗಲ್ಲ. ಆ ಪವಿತ್ರಾ ಗೌಡಗೂ ಹೊಡೆದಿದ್ದಾನೆ. ಅವಳು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿ ಸೋಮವಾರ ಬಿಡುಗಡೆಯಾಗಿದ್ದಾಳೆ. ಇನ್ನು 4 ಮಂದಿ ಆರೋಪಿಗಳು ನಾವೇ ಕೊಲೆ ಮಾಡಿದ್ದೇವೆಂದು ಠಾಣೆಗೆ ಬಂದು ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಬಿಟ್ಟರು. ಠಾಣೆ ಮೆಟ್ಟಿಲು ಹತ್ತಿ ಬಂದಂತೆ ಎಲ್ಲ ನಿಜ ಹೊರಗೆ ಬರುತ್ತದೆ.
ಸ್ನೇ: ಅದ್ಯಾಕೆ ರೋಡ್‌ ಸೈಡ್‌ನ‌ಲ್ಲಿ ಶವ ಎಸೆದರು ಎಂಬುದು ಗೊತ್ತಾಗಲಿಲ್ಲ?
ಪೊ: ಎಷ್ಟು ದೂರ ಅಂತಾ ಎತ್ತಿಕೊಂಡು ಹೋಗೋಕಾಗುತ್ತೆ. ಏನೋ ಮಾಡಾಕ್ಕೆ ಹೋಗಿ ಇನ್ನೇನೋ ಮಾಡ್ಕೊಂಡ್ರೊ. 50 ಕೋಟಿ ರೂ. ಬಜೆಟ್‌ದು ಡೆವಿಲ್‌ ಅಂತಾ ಸಿನೆಮಾ ಓಡ್ತಾ ಇದೆ. ಇನ್ನು 6 ತಿಂಗಳು ಹೆಂಗೆ. ದೊಡ್ಡ ದೊಡ್ಡ ವಕೀಲರನ್ನು ಕರೆಸಿದರೂ 6 ತಿಂಗಳು ಇವ್ನಿಗೆ ಬೇಲ್‌ ಸಿಗಲ್ಲ. ಬೇಲ್‌ ಕೊಟ್ಟರೆ, ಬೇರೆಯವರೂ ಮಾಡಲ್ವಾ?


Spread the love

About Laxminews 24x7

Check Also

ಎರಡು ಕರಡಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

Spread the love ಕಂಪ್ಲಿ (ಬಳ್ಳಾರಿ): ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡಿದ್ದು, ಅವುಗಳನ್ನು ಸೆರೆ ಹಿಡಿಯಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ