Breaking News

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಕೇಸ್: ಬಂಧಿತ ಕಿಂಗ್ ಪಿನ್ ಅಬ್ದುಲ್ ಅಸಲಿಗೆ ವೈದ್ಯನೇ ಅಲ್ಲ

Spread the love

ಬೆಳಗಾವಿ, ಜೂನ್​ 10: ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಪ್ರಕರಣದಲ್ಲಿ(Child Trafficking)ಈಗಾಗಲೇ ಪೊಲೀಸರು ವೈದ್ಯ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆದರೆ ಅಸಲಿಗೆ ಬಂಧಿತ ವೈದ್ಯ ಕಿಂಗ್​ಪಿನ್ (Kingpin) ಅಬ್ದುಲ್ ಗಫರ್ ಲಾಡಖಾನ್ ವೈದ್ಯನೇ ಅಲ್ಲ. ಯಾವುದೇ ಅನುಮತಿ ಪಡೆಯದೆ ಕಳೆದ 10 ವರ್ಷಗಳಿಂದ ಕಿತ್ತೂರು ಪಟ್ಟಣದಲ್ಲಿ ಆರ್‌ಎಂಪಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ. ಈತನ ಬಗ್ಗೆ ಹಲವು ಬಾರಿ ಸ್ಥಳೀಯರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇನ್ನು ಮಕ್ಕಳ ಮಾರಾಟ ಅಷ್ಟೇ ಅಲ್ಲದೇ ಭ್ರೂಣಹತ್ಯೆ ಕೂಡ ಮಾಡಿದ್ದಾಗಿ ಮಾಹಿತಿ ಇದೆ.

ಪ್ರಕರಣ ಕುರಿತಾಗಿ ಟಿವಿ9 ವರದಿ ಬೆನ್ನಲ್ಲೇ ಸ್ಥಳಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಎಸ್​​ಎಸ್​ ಸಿದ್ದನ್ನವರ್ ಭೇಟಿ ನೀಡಿದರು. ಕಿತ್ತೂರಿನ ಸೋಮವಾರಪೇಟೆಯಲ್ಲಿರುವ ಅಬ್ದುಲ್ ಕ್ಲಿನಿಕ್​ಗೆ ಭೇಟಿ ನೀಡಿ ವಿಚಾರಣೆ ಮಾಡಿದ್ದಾರೆ. ಅಧಿಕಾರಿಗಳು ಕೇಳಿದಾಗ ಹೆಂಡತಿ ಫರಹತ್ ಲಾಡಖಾನ್ ಹೆಸರು ಹೇಳಿದ್ದಾರೆ. ಆಕೆಯದ್ದು ಬಿ ಎಚ್​ಎಂಎಸ್​ ಆಗಿದೆ ಕ್ಲಿನಿಕ್ ಅನುಮತಿಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಕೇಸ್: ಬಂಧಿತ ಕಿಂಗ್ ಪಿನ್ ಅಬ್ದುಲ್ ಅಸಲಿಗೆ ವೈದ್ಯನೇ ಅಲ್ಲ

ಇನ್ನು ತಾಲೂಕು ಆರೋಗ್ಯಾಧಿಕಾರಿಗೆ ಸ್ಥಳೀಯ ನಿವಾಸಿಗಳಿಂದ ತರಾಟೆ ತೆಗೆದುಕೊಳ್ಳಲಾಗಿದೆ. ಇವನಿಗೆ ಅನುಮತಿ ಹೇಗೆ ‌ಕೊಟ್ಟಿದ್ದೀರಿ. ನಕಲಿ ವೈದ್ಯನ ಮನೆ ಹರಾಜು ಹಾಕುವಂತೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿ ಅಬ್ದುಲ್ ಲಾಡಖಾನ್​ನ್ನು ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಕಿಂಗ್​ಪಿನ್ ಡಾ.ಅಬ್ದುಲ್ ಲಾಡಖಾನ್, ನೇಗಿನಹಾಳ ಗ್ರಾಮದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಹಾಗೂ ಪ್ರವೀಣ್​ನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.


Spread the love

About Laxminews 24x7

Check Also

New Zealand ವಿರುದ್ಧ ಟೆಸ್ಟ್‌ : ಟೀಮ್ ಇಂಡಿಯಾಕ್ಕೆ ವಾಷಿಂಗ್ಟನ್ ಸುಂದರ್ ಸೇರ್ಪಡೆ

Spread the love ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ಧದ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡಕ್ಕೆ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ