ಹೊಸಕೋಟೆ: ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ವಿದ್ಯಾರ್ಥಿಯೊಬ್ಬ ಮಾವು ಕೀಳಲು ಹೋಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ.
ಸೂಲಿಬೆಲೆ ಹೋಬಳಿಯ ತಿಮ್ಮಪ್ಪನಹಳ್ಳಿಯ ಸಾಯಿಭುವನ್(13) ಮೃತ ವಿದ್ಯಾರ್ಥಿ. ಈತ 9ನೇ ತರಗತಿಯಲ್ಲಿ ಕಲಿಯುತ್ತಿದ್ದ.

ವಿದ್ಯಾರ್ಥಿನಿಲಯ ಕಟ್ಟಡದ ಮೇಲೆ ಬಟ್ಟೆ ಒಣಗಿಸುವ ವೇಳೆ ಪಕ್ಕದಲ್ಲಿದ್ದ ಮಾವಿನ ಮರದಲ್ಲಿದ್ದ ಮಾವಿನ ಹಣ್ಣು ಕೀಳಲು ಹೋಗಿದ್ದ. ಮಾವಿನ ಹಣ್ಣು ಕೀಳಲು ಬಳಸಿದ ಕಂಬಿಗೆ ಮರದ ಸಮೀಪ ಹಾದುಹೋಗಿದ್ದ 11 ಕೆ.ವಿ. ವಿದ್ಯುತ್ ತಗುಲಿ ಕಟ್ಟಡದಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಆಸ್ಪತ್ರೆ ಬಳಿ ಮೃತ ಸಾಯಿಭುವನ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನೆಯ ಕುರಿತು ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7