ಕಾರವಾರ: ಪಶ್ಚಿಮ ಘಟ್ಟ ಹಾದುಹೋಗಿರುವ ಉತ್ತರ ಕನ್ನಡ ಜಿಲ್ಲೆ ಪ್ರಾಕೃತಿಕವಾಗಿ ಸಮೃದ್ಧವೋ ಮಳೆಗಾಲದಲ್ಲಿ ಅಷ್ಟೇ ಅಪಾಯಕಾರಿಯೂ ಹೌದು!
ಇಲ್ಲಿನ ಹಸಿರು ಪರಿಸರ, ಧುಮ್ಮಿಕ್ಕುವ ಜಲಪಾತಗಳನ್ನು ಕಣ್ತುಂಬಿಕೊಳ್ಳಲು ನಾನಾ ಕಡೆಯಿಂದ ಜನರು ಬರುತ್ತಿದ್ದರು. ಕುಮಟಾದ ತಂಡ್ರಕುಳಿ, ಯಲ್ಲಾಪುರದ ಕಳಚೆ, ಭಟ್ಕಳದ ಮುಟ್ಟಳ್ಳಿಯಲ್ಲಿ ಸಂವಿಸಿದ ಭೂಕುಸಿತ ಜನರನ್ನು ತಲ್ಲಣಗೊಳಿಸಿತು.
ಕೆಲ ವರ್ಷಗಳಿಂದೀಚೆಗೆ ಜಿಲ್ಲೆಯಲ್ಲಿ ಸಾಲು ಸಾಲು ಭೂಕುಸಿತದ ಪ್ರಕರಣಗಳು ವರದಿಯಾಗುತ್ತಲೇ ಇವೆ.

ಪರಿಸರ ಸೂಕ್ಷ್ಮ ಜಿಲ್ಲೆಯಲ್ಲಿ ಭೂಕುಸಿತದ ಕುರಿತು ಪರಿಶೀಲಿಸಿದ್ದ ಭಾರತೀಯ ಭೂಗರ್ಭಶಾಸ್ತ್ರ ಮಾಹಿತಿ ಕೇಂದ್ರದ ತಜ್ಞರು ಜಿಲ್ಲೆಯಲ್ಲಿ 436 ಸ್ಥಳಗಳಲ್ಲಿ ಭೂಕುಸಿತ ಸಂಭವಿಸುವ ಸಂಭವನೀಯ ಸ್ಥಳಗಳಿವೆ. ಕ್ವಾರಿ, ಅತಿಕ್ರಮಣ ಕುಸಿತಕ್ಕೆ ಪ್ರಮುಖ ಕಾರಣ ಎಂಬ ವರದಿ ಸಲ್ಲಿಸಿದ್ದರು. ಈ ಪಟ್ಟಿಯಲ್ಲಿ ಕೊಡಸಳ್ಳಿಯ ಅಣೆಕಟ್ಟೆ ಪ್ರದೇಶದ ಸಮೀಪವೂ ಕುಸಿತಗೊಳ್ಳುವ ಸಾಧ್ಯತೆ ಇದೆ ಎಂಬ ಉಲ್ಲೇಖ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದರು.
Laxmi News 24×7