Breaking News

‘ಫಿಟ್‌’ ಆಗಲು ಪೊಲೀಸರ ಕಸರತ್ತು

Spread the love

ಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸ್‌ ಇಲಾಖೆಯಲ್ಲಿ ಸ್ಥೂಲಕಾಯ ಹೊಂದಿದ್ದ ನೂರು ಪೊಲೀಸರನ್ನು ಸದೃಢರಾನ್ನಾಗಿರುವ ಕಾರ್ಯ ಕಳೆದ 10 ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ.

ಜಿಲ್ಲೆಯಲ್ಲಿ ಒಬ್ಬರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಇಬ್ಬರು ಎಎಸ್‌ಪಿ, ಮೂವರು ಡಿವೈಎಸ್‌ಪಿ, 15 ಮಂದಿ ಪಿಐ, 45 ಪಿಎಸ್‌ಐಗಳೂ ಸೇರಿದಂತೆ ಒಟ್ಟು 867 ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದಾರೆ.

ಬಳ್ಳಾರಿ | 'ಫಿಟ್‌' ಆಗಲು ಪೊಲೀಸರ ಕಸರತ್ತು

ಇತ್ತೀಚೆಗೆ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಬಿಎಂಐ (ಬಾಡ್‌ ಮಾಸ್‌ ಇಂಡೆಕ್ಸ್‌) ಅಂಕ 30ಕ್ಕಿಂತ ಅಧಿಕವಿರುವ (ಸ್ಥೂಲಕಾಯ) ನೂರು ಸಿಬ್ಬಂದಿಗೆ ಮೇ 29ರಿಂದ ಆರೋಗ್ಯ ಶಿಬಿರ ಕೈಗೊಳ್ಳಲಾಗಿದೆ.

ನೂರು ಸಿಬ್ಬಂದಿಯನ್ನು ಮೂರು ತಂಡಗಳಾಗಿ ವಿಭಾಗಿಸಲಾಗಿದೆ. ಇದರಲ್ಲಿ ಮೂವರು ಪಿಎಸ್‌ಐಗಳು, 10 ಎಎಸ್‌ಗಳು ಇದ್ದಾರೆ. 21 ದಿನಗಳ ವರೆಗೆ ಇವರಿಗೆ ನಿತ್ಯ ಆರೋಗ್ಯ ತರಬೇತಿ ನೀಡಲಾಗುತ್ತದೆ. ‘ಸುರಕ್ಷಿತ ಬಳ್ಳಾರಿಗಾಗಿ ಸದೃಢ ಪೊಲೀಸ್’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಪೊಲೀಸರಿಗೆ ಆರೋಗ್ಯ ಪಾಠ ಮಾಡಲಾಗುತ್ತಿದೆ.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ