ರಾಯಚೂರು: ರವಿವಾರ ರಾತ್ರಿಯಿಂದ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅವ್ಯವಸ್ಥೆ ಉಂಟಾಗಿದ್ದು, ಮಾವಿನ ಕೆರೆ ಹತ್ತಿರದ ತರಕಾರಿ ಮಾರಾಟ ಕೇಂದ್ರ ಕೆಸರು ಗದ್ದೆಯಂತಾಗಿದೆ.
ಚರಂಡಿ ತುಂಬಿ ಕೊಚ್ಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ತರಕಾರಿ ಮಾರಾಟ ಪ್ರದೇಶವೆಲ್ಲ ಕೆಸರು ಗದ್ದೆಯಂತಾಗಿದೆ.
ತರಕಾರಿ ಮಾರಾಟಗಾರರಿಂದ ಶುಲ್ಕ ವಸೂಲಿ ಮಾಡುವ ನಗರಸಭೆ ಅವರಿಗೆ ಕನಿಷ್ಠ ತರಕಾರಿ ಕಟ್ಟೆ ನಿರ್ಮಿಸದಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ತರಕಾರಿಯೆಲ್ಲ ಕೆಸರು ಮಯವಾಗಿರುವುದಕ್ಕೆ ಜನ ಖರೀದಿ ಮಾಡಲು ಹಿಂದೇಟು ಹಾಕುವಂತಾಗಿದೆ. ರೈತರಿಗೆ ಸೂಕ್ತ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಅಂಬಾಜಿರಾವ್ ಒತ್ತಾಯಿಸಿದ್ದಾರೆ