Breaking News

ಆಶಾ ಕಾರ್ಯಕರ್ತೆರಿಗೆ 4 ತಿಂಗಳಿಂದ ಸಂಬಳ ಇಲ್ಲ

Spread the love

ಬೆಂಗಳೂರು: ಚುನಾವಣೆ, ಲಸಿಕೀಕರಣ, ಗರ್ಭಿಣಿಯರು, ಬಾಣಂತಿಯರ ಆರೋಗ್ಯ ವಿಚಾರಣೆ ಸಹಿತ ವಿವಿಧ ಕಾರ್ಯಗಳನ್ನು ನಡೆಸಿ ಮಾಹಿತಿ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ 3-4 ತಿಂಗಳುಗಳಿಂದ ಗೌರವಧನ ಪಾವತಿಯಾಗಿಲ್ಲ.

ರಾಜ್ಯಾದ್ಯಂತ ಒಟ್ಟು 62 ಸಾವಿರ ಆಶಾ ಕಾರ್ಯಕರ್ತೆಯರಿಗೆ ಕಳೆದ ಫೆಬ್ರವರಿಯಿಂದ ಗೌರವಧನ ಸಿಕ್ಕಿಲ್ಲ.

ರಾಜ್ಯ ಸರಕಾರದಿಂದ ನೀಡುವ 5,000 ರೂ. ಗೌರವಧನ ಮತ್ತು ಕೇಂದ್ರ ಸರಕಾರದ ಅಂದಾಜು 5,000 ರೂ. ಪ್ರೋತ್ಸಾಹಧನ ಸಹಿತ 3 ತಿಂಗಳ ಒಟ್ಟು 30 ಸಾವಿರ ರೂ. ಇನ್ನೂ ಪಾವತಿಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ 3 ತಿಂಗಳ ಗೌರವಧನ ಬಾಕಿ ಇದ್ದರೆ, ಇನ್ನೂ ಕೆಲವೆಡೆ 4 ತಿಂಗಳುಗಳಿಂದ ಬಾಕಿ ಇದೆ. ಜತೆಗೆ ಚುನಾವಣೆ ವೇಳೆಯ ಪ್ರೋತ್ಸಾಹಧನವನ್ನೂ ಬಾಕಿ ಉಳಿಸಿಕೊಂಡಿದೆ.


Spread the love

About Laxminews 24x7

Check Also

‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಕುಮಾರ್ ಬಗ್ಗೆ ವಿಡಿಯೋ ಮಾಡಿದ್ದ ಕಿಡಿಗೇಡಿಗಳು.!

Spread the loveಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದು ಭದ್ರತಾ ಲೋಪವನ್ನು ಬಯಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ