Breaking News

8000 ರೂ. ಜಮೆ ವದಂತಿ: 10 ದಿನಗಳಲ್ಲಿ 10 ಸಾವಿರ ಅಂಚೆ ಐಪಿಪಿಬಿ ಖಾತೆ!

Spread the love

ಬೆಂಗಳೂರು: ಜನರಲ್‌ ಪೋಸ್ಟ್‌ ಆಫೀಸ್‌ ಬೆಂಗಳೂರಿನ ಕಚೇರಿಯಲ್ಲಿ ಗುರುವಾರ ಒಂದೇ ದಿನ 1,250 ಹೊಸ ಐಪಿಪಿಬಿ ಖಾತೆಯ ತೆರೆಯಲಾಗಿದೆ.

ಅಂಚೆ ಇಲಾಖೆಯು ಪ್ರತಿ ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ) ಖಾತೆಗೆ 8,000 ರೂ. ಜಮೆಯಾಗಲಿದೆ ಎನ್ನುವುದು ಕೇವಲ ವದಂತಿ ಎನ್ನುವ ಕುರಿತು ಸ್ಪಷ್ಟನೆ ನೀಡಲಾಗಿದೆ.8000 ರೂ. ಜಮೆ ವದಂತಿ: 10 ದಿನಗಳಲ್ಲಿ 10 ಸಾವಿರ ಅಂಚೆ ಐಪಿಪಿಬಿ ಖಾತೆ!

ಆದರೂ ಜನರು ಮಾತ್ರ ಐಪಿಪಿಬಿ ಖಾತೆ ತೆರೆಯಲು ಮುಗಿ ಬೀಳುವುದು ಕಡಿಮೆಯಾಗಿಲ್ಲ. ಕಳೆದ 10 ದಿನಗಳಿಂದ ಸುಮಾರು 10 ಸಾವಿರ ಐಪಿಪಿಬಿ ಖಾತೆ ತೆರೆಯಲಾಗಿದೆ. ಜಿಪಿಒ ಕಚೇರಿಯಲ್ಲಿ 9 ಮಂದಿ ಪೋಸ್ಟ್‌ ಮಾಸ್ಟರ್‌ ಅರ್ಜಿ ಪಡೆದು ಹೊಸ ಖಾತೆ ತೆರೆಯುವಲ್ಲಿ ಮಗ್ನರಾಗಿದ್ದಾರೆ.

ಇಂಡಿಯನ್‌ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಖಾತೆ ತೆರೆಯಲು ಇಚ್ಛಿಸುವವರಿಗೆ ಹೊಸ ಖಾತೆಯನ್ನು ಮಾಡಿಕೊಡುತ್ತೇವೆ. ಇದಕ್ಕೆ ಯಾವುದೇ ಷರತ್ತು ಇಲ್ಲ. ಆದರೆ ಹೊಸ ಖಾತೆ ತೆರೆಯುವಾಗ ಕನಿಷ್ಠ 200 ರೂ. ಜಮೆ ಮಾಡಬೇಕು ಎಂದು ಬೆಂಗಳೂರು ಮುಖ್ಯ ಪೋಸ್ಟ್‌ ಮಾಸ್ಟರ್‌ ಎಚ್‌.ಎಂ. ಮಂಜೇಶ್‌ ತಿಳಿಸಿದರು.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ