ವಿಜಯಪುರ: ಟ್ರ್ಯಾಕ್ಟರ್‌ನಲ್ಲಿ ಸೌಂಡ್ ಕಡಿಮೆ ಮಾಡು ಎಂದಿದ್ದಕ್ಕೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ ಘಟನೆ ವಿಜಯಪುರ ಜಿ. ಕಲಕೇರಿ ಗ್ರಾಮದಲ್ಲಿ ನಡೆದಿದೆ.
ಈ ಮಾರಾಮಾರಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕಲಕೇರಿಯ ಬಾಷಾಸಾಬ್ ವಠಾರ್, ಮಹ್ಮದ್‍ನಾಸೀರ್, ಮಹ್ಮದ್ ಶರೀಫ್ ಎಂಬವರ ಮೇಲೆ ಹಲ್ಲೆ ನಡೆದಿದೆ. ಕಲಕೇರಿಯ ಮಹ್ಮದ್ ಶರೀಫ್ ಬಡೇಘರ್, ಹುಸೇನ್ ಬಡೇಘರ್, ರಫೀಕ್ ಸೇರಿದಂತೆ 12ಕ್ಕೂ ಅಧಿಕ ಜನರಿಂದ ಹಲ್ಲೆ ನಡೆದಿದೆ.ಟ್ರ್ಯಾಕ್ಟರ್‌ನಲ್ಲಿ ಜೋರಾದ ಸೌಂಡ್ ಮೂಲಕ ಡಿಜೆ ಸಾಂಗ್ ಹಾಕಿಕೊಂಡು ಹೊರಟಿದ್ದ ಮಹ್ಮದ್ ಶಾಹೀದ್ ಬಡೇಘರ್‍ಗೆ ಬಾಷಾಸಾಬ್ ವಠಾರ್ ಎಂಬವರು ಸೌಂಡ್ ಕಡಿಮೆ ಮಾಡು ಅಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹಮ್ಮದ್ ಶಾಹೀದ್ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾನಂತೆ. ಹಲ್ಲೆಯಿಂದ ಮೂವರಿಗೆ ಗಂಭೀರಗಾಯ ಆಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Laxmi News 24×7