Breaking News

ಬಿಜೆಪಿ ಗೆಲುವಿನ ಅಂತರ ಕುಸಿತ ? 6 ನೇ ಹಂತದ ಚುನಾವಣೆ ಬಳಿಕ ತನ್ನ ಭವಿಷ್ಯವಾಣಿಯನ್ನೇ ಬದಲಿಸಿದ ‘ಸಟ್ಟಾ ಬಜಾರ್’

Spread the love

ಲೋಕಸಭೆ ಚುನಾವಣೆಯ ಕೊನೆಯ ಹಂತ ಬಾಕಿಯಿರುವಾಗಲೇ ರಾಜಸ್ಥಾನದ ಬೆಟ್ಟಿಂಗ್ ಮಾರ್ಕೆಟ್ ಫಲೋಡಿ ಸಟ್ಟಾ ಬಜಾರ್, ಆರನೇ ಹಂತದ ಚುನಾವಣೆಯ ನಂತರ ಯಾರಿಗೆ ಎಷ್ಟು ಸ್ಥಾನ ಎನ್ನುವ ವಿಚಾರದಲ್ಲಿ ಮತ್ತೊಂದು ಭವಿಷ್ಯ ಹೇಳಿದೆ. ಬಿಜೆಪಿ ಮೈತ್ರಿಕೂಟ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದಿರುವ ಬಜಾರ್, ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನ ಪಡೆಯುವುದು ಕಷ್ಟವೆಂದಿದೆ.

ಕೆಲವು ದಿನಗಳ ಹಿಂದೆ ತಾನು ಭವಿಷ್ಯ ನುಡಿದಿದ್ದಕ್ಕಿಂತ ಇದೀಗ 10 ಸ್ಥಾನಗಳು ಕಡಿಮೆಯಾಗುತ್ತವೆ ಎಂದು ಆರನೇ ಚುನಾವಣೆ ಬಳಿಕ ತಿಳಿಸಿದೆ.

ಬಾಜಿ ಕಟ್ಟುವ ಮಾರ್ಕೆಟ್ ಫಲೋಡಿ ಸಟ್ಟಾ ಬಜಾರ್ ಮಾಹಿತಿ ಪ್ರಕಾರ ಬಿಜೆಪಿ 543 ಸ್ಥಾನಗಳಲ್ಲಿ 290 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ ಸ್ವಂತ ಬಹುಮತ ಪಡೆಯಲಿದೆ. ಈ ಹಿಂದೆ ಬಿಜೆಪಿ 300 ಸ್ಥಾನಗಳನ್ನು ಗೆಲ್ಲಲಿದೆ ಎಂದು ಫಲೋಡಿ ಸಟ್ಟಾ ಬಜಾರ್ ವರದಿಗಳು ಸೂಚಿಸಿದ್ದವು. ಆದರೆ ಇದೀಗ ಗೆಲ್ಲುವ ಸೀಟ್ ಗಳು ಕಮ್ಮಿಯಾಗಿವೆ ಎಂದು ಅಂದಾಜಿಸಲಾಗಿದೆ.BIG NEWS: ಬಿಜೆಪಿ ಗೆಲುವಿನ ಅಂತರ ಕುಸಿತ ? 6 ನೇ ಹಂತದ ಚುನಾವಣೆ ಬಳಿಕ ತನ್ನ ಭವಿಷ್ಯವಾಣಿಯನ್ನೇ ಬದಲಿಸಿದ 'ಸಟ್ಟಾ ಬಜಾರ್'

ರಾಜಸ್ಥಾನದ ಜೋಧ್‌ಪುರ್ ಜಿಲ್ಲೆಯ ಸಣ್ಣ ಪಟ್ಟಣವಾದ ಫಲೋಡಿ, ಚುನಾವಣಾ ಸಂಬಂಧಿತ ಬೆಟ್ಟಿಂಗ್ ಅಷ್ಟೇ ಅಲ್ಲದೇ ಕ್ರೀಡೆ ಸೇರಿದಂತೆ ಆಸಕ್ತಿದಾಯಕ ವಿಷಯಗಳಲ್ಲಿ ಬೆಟ್ಟಿಂಗ್ ನಡೆಸುವ ಪ್ರಮುಖ ಕೇಂದ್ರವೆಂದು ಹೆಸರುವಾಸಿಯಾಗಿದೆ. ಇದರ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಈಗ 340-350 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ, ಇದು ಮೂರನೇ ಎರಡರಷ್ಟು ಬಹುಮತಕ್ಕಿಂತ ಕಡಿಮೆಯಾಗಿದೆ. ಕಾಂಗ್ರೆಸ್ ಪಕ್ಷವು ಸುಮಾರು 50-51 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.Image

ಈ ಬದಲಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (NDA) ಒಳಗಿನ ಇತರ ಪಕ್ಷಗಳ ಮಾತುಕತೆಗಳು, ಕಡಿಮೆ ಮತದಾನದ ಪ್ರಮಾಣ ಮತ್ತು ಚುನಾವಣಾ ಬಾಂಡ್‌ಗಳ ಮೇಲಿನ ಸುಪ್ರೀಂ ಕೋರ್ಟ್ ತೀರ್ಪು ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.


Spread the love

About Laxminews 24x7

Check Also

DCM ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ : ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ CBI

Spread the love ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ