Breaking News

ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ನೀರಿನ ಹರಿವನ್ನು ಪರಿಶೀಲಿಸಿದ ರಾಹುಲ್ ಜಾರಕಿಹೊಳಿ

Spread the love

ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ಹರಿಬಿಡಲಾಗುತ್ತಿರುವ ನೀರಿನ ಹರಿವನ್ನು ಇಂದು ರಾಯಬಾಗ ತಾಲೂಕಿನ ಮುಗಳಕೋಡ ಚೌಕಿ ಬಳಿ ಪರಿಶೀಲಿಸಿದರು.

ಪ್ರಸ್ತುತ ಬೆಳಗಾವಿ ಹಾಗೂ ಬಾಗಲಕೋಟೆ, ಜಿಲ್ಲೆಯ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದ್ದರಿಂದ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಶ್ರೀ ಸತೀಶ ಜಾರಕಿಹೊಳಿಯವರ ನಿರ್ದೇಶನದ ಮೇರೆಗೆ ,

ಮೇ 25 ರಿಂದ ಜೂನ್‌ 4ರ ವರೆಗೆ 5.578 ಟಿಎಂಸಿ ನೀರನ್ನು ಹಿಡಕಲ್ ಜಲಾಶಯದಿಂದ ಹರಿಸಲಾಗುತ್ತಿದ್ದು, ನೀರು ಪೋಲಾಗದಂತೆ, ನೀರನ್ನು ಮಿತವಾಗಿ ಬಳಸುವುದಕ್ಕೆ ರೈತರು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದರು

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಶಿವು ಪಾಟೀಲ ಹಾಗೂ ಆರೀಫ್ ಪಿರಜಾದೆ ಇದ್ದರು.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ