Breaking News

ಕೂಲ್‌ ಕನ್ನಡತಿ ಅಕ್ಕ ಅನು ದಿಢೀರ್ ಸಿಟ್ಟಾಗಿದ್ದೇಕೆ?

Spread the love

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣ ಬಳುಸುವವರಿಗೆ ಕನ್ನಡತಿ ಅಕ್ಕ ಅನು ಚಿರಪರಿಚಿತರು. ಸದಾ ಪ್ಯಾಂಟ್‌-ಶರ್ಟ್ ಧರಿಸಿ ತಲೆಗೆ ತುರುಬೋ ಅಥವಾ ಜುಟ್ಟೋ ಕಟ್ಟಿ ರಣ ಬಿಸಿಲಿಲೆನ್ನದೇ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯುವ ಕಾರ್ಯದಲ್ಲೇ ಕಾಣಿಸಿಕೊಳ್ಳುವ ಅಕ್ಕ ಅನು ಅವರ ಕಾರ್ಯ ಇಂದಿನ ಯುವ ಜನತೆಗೆ ಮಾದರಿ.

ಸರ್ಕಾರಿ ಶಾಲೆಗಳು, ಪಾಳು ಬೀಳುತ್ತಿರುವ ದೇವಸ್ಥಾನ ಹಾಗೂ ಪಾರಂಪರಿಕ ಕಟ್ಟಡಗಳಿಗೆ ಬಣ್ಣ ಹಚ್ಚಿ ಹೊಸ ಲುಕ್‌ ನೀಡುವ ಅಕ್ಕ ಅನು ಅವರನ್ನು ಕಂಡರೆ ಕನ್ನಡಿಗರಿಗೆ ಗೌರವದ ಭಾವ. ಸದಾ ತಮ್ಮ ಕಾರ್ಯದಲ್ಲೇ ಬ್ಯೂಸಿ ಇರುವ ಕನ್ನಡತಿ ಅಕ್ಕ ಅನು ಆಗಾಗ ತಮ್ಮ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಹಾಕುವವರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಒಂದೊಮ್ಮೆ ಲೈವ್‌ನಲ್ಲೇ ಕಣ್ಣೀರು ಹಾಕಿದ್ದರು.ಇಂತಹ ಸಮಯದಲ್ಲಿ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ಮಾಡುತ್ತಿರುವ ಅಕ್ಕ ಅನು ಅವರಿಗೆ ಅನೇಕರು ಬೆಂಬಲಕ್ಕೆ ನಿಂತಿದ್ದರು. ಈವರೆಗೂ ತಮ್ಮ ಬಗ್ಗೆ ಬರುತ್ತಿದ್ದ ಕೆಟ್ಟ ಕಮೆಂಟ್ ಕಮೆಂಟ್‌ಗೆ ಕೂಲ್‌ ಆಗೇ ರಿಯ್ಯಾಟ್ ಮಾಡುತ್ತಿದ್ದ ಅಕ್ಕ ಅನು, ಇದೀಗ ಏಕಾಏಕಿ ಹೀಗೆ ಸಿಟ್ಟಿಗೆದ್ದಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಅಕ್ಕ ಅನು ಕೆಲವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಮನಸ್ಥಿತಿಗಳೇ

ನನ್ನ ಹೆಸರಲ್ಲಿ ನಿಮ್ಮ ಪಾತ್ರವೇನು? ಎಂದು ಪ್ರಶ್ನೆ ಮೂಲಕ ವಿಡಿಯೋ ಹಂಚಿಕೊಂಡಿರುವ ಅಕ್ಕ ಅನು, 50 ವರ್ಷದ ಹಳೆಯ ಶಾಲೆಗೆ ಹೋಗಿದ್ದಾಗ ಅಲ್ಲಿನ ಪರಿಸ್ಥಿತಿ ಬಗ್ಗೆ ಬೇಸರ ಹೊರ ಹಾಕಿದ್ದಾರೆ. ತಾವು ಮಾಡುವ ಕೆಲಸಗಳಿಗೆ ಅಲ್ಲೇಲ್ಲೂ ಕುಳಿತು ಕಮೆಂಟ್‌ ಮಾಡುವವರ ವಿರುದ್ಧ ಗುಡುಗಿರುವ ಅಕ್ಕ ಅನು, ಈ ರೀತಿ ಚಿಕ್ಕ ಪುಟ್ಟ ವಿಷಯಗಳನ್ನು ಪ್ರಶ್ನಿಸಿ ಕಮೆಂಟ್‌ ಹಾಕುವ ನೀವು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವನ್ನು ಪ್ರಶ್ನಿಸಿ. ವ್ಯವಸ್ಥೆಯ ವಿರುದ್ಧ ಪ್ರಶ್ನೆ ಎತ್ತಿ..ಸರ್ಕಾರಿ ಶಾಲೆಗಳ ಕುಂದು ಕೊರತೆಗಳಿರುವ ಬಗ್ಗೆ ಸರ್ಕಾರಕ್ಕೆ ಒತ್ತಡ ಹಾಕಿ ಎಂದಿದ್ದಾರೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ