Breaking News

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್: ಅನುಮಾನ ಮೂಡಿಸಿದ ಎಸ್​ಐಟಿ ನಡೆ

Spread the love

ಹಾಸನ, ಮೇ.26: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್ ಡ್ರೈವ್ ಕೇಸ್‌ (Pendrive) ಸಂಬಂಧ ಎಸ್​ಐಟಿ ಪೊಲೀಸರ ನಡೆ ಮೇಲೆ ಅನುಮಾನ ಮೂಡುತ್ತಿದೆ. ಎಫ್​ಐಆರ್​​ನಲ್ಲಿ ಉಲ್ಲೇಖಿಸಿದ್ದ ಐವರು ಪ್ರಮುಖ ಆರೋಪಿಗಳನ್ನು ಎಸ್​ಐಟಿ ಬಂಧಿಸಿಲ್ಲ. ಹೀಗಾಗಿ ಎಸ್​ಐಟಿ (SIT) ತನಿಖಾ ವೈಖರಿ ಅಚ್ಚರಿ ಮೂಡಿಸಿದೆ.ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್: ಅನುಮಾನ ಮೂಡಿಸಿದ ಎಸ್​ಐಟಿ ನಡೆ, ಪ್ರಮುಖ ಆರೋಪಿಗಳ ಬಂಧನವೇ ಆಗಿಲ್ಲ

ಪ್ರಕರಣದಲ್ಲಿ ಆರು, ಏಳು, ಎಂಟನೇ ಆರೋಪಿಗಳೆಂದು ಮೂವರನ್ನು ಬಂಧಿಸಲಾಗಿದೆ.

ಪ್ರೀತಂಗೌಡ ಆಪ್ತ ಲಿಖಿತ್ ಗೌಡ, ಕಚೇರಿ ಸಹಾಯಕ ಚೇತನ್ ಹಾಗೂ ವಕೀಲ ದೇವರಾಜೇಗೌಡನನ್ನು ಬಂಧಿಸಲಾಗಿದೆ. ಆದರೆ ಎಫ್​ಐಆರ್​ನಲ್ಲಿ ಹೆಸರಿದ್ದ ಪ್ರಜ್ವಲ್ ಮಾಜಿ‌ ಕಾರು ಚಾಲಕ ಕಾರ್ತಿಕ್, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಆಪ್ತ ಪುಟ್ಟಿ ಅಲಿಯಾಸ್ ಪುಟ್ಟರಾಜ್, ವೀಡಿಯೋ ಹಂಚಿಕೆಯ ಪ್ರಮುಖ ಆರೋಪಿ‌ ನವೀನ್ ಗೌಡ, ಚೇತನ್ ಹಾಗು ಪ್ರೀತಂಗೌಡ ಆಪ್ತ ಶರತ್​​ನನ್ನು ಬಂಧಿಸಿಲ್ಲ.

ಮೇ 8ರಂದೇ ಪುಟ್ಟರಾಜ್, ನವೀನ್, ಚೇತನ್, ಕಾರ್ತಿಕ್ ನಿರೀಕ್ಷಣ ಜಾಮೀನು ಅರ್ಜಿ ವಜಾ ಆಗಿದೆ. ಜಿಲ್ಲಾ ನ್ಯಾಯಾಲಯ ದಲ್ಲಿ ಕೇಸ್ ವಜಾ ಹಿನ್ನೆಲೆಯಲ್ಲಿ ಆರೋಪಿತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಆದರೂ ಪ್ರಮುಖ ಆರೋಪಿಗಳು ಅರೆಸ್ಟ್ ಆಗಿಲ್ಲ.

ಈವರೆಗೆ ಬಂಧಿಸಿದ ಮೂವರಿಂದ ಮಹತ್ವದ ದಾಖಲೆ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಲ್ಯಾಪ್‌ಟಾಪ್ ಅನ್ನು ಎಫ್​ಎಸ್​ಎಲ್​ಗೆ ಕಳಿಸಲಾಗಿದೆ. ವರದಿ ಬಂದ ಬಳಿಕ ವಿಚಾರಣೆ ಮುಂದುವರಿಯುವ ಸಾದ್ಯತೆ ಇದೆ.


Spread the love

About Laxminews 24x7

Check Also

ನನ್ನಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ’ ಅನ್ನೋದನ್ನು ನಾನು ಒಪ್ಪಲ್ಲ: ಡಿಕೆಶಿಗೆ ಸತೀಶ್​ ಜಾರಕಿಹೊಳಿ ಟಾಂಗ್​

Spread the loveಬೆಳಗಾವಿ: ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಕೂಡಾ ಒಪ್ಪುವುದಿಲ್ಲ. ನಮಗಿರುವ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ