Breaking News
Home / Uncategorized / ರೇವ್ ಪಾರ್ಟಿ ಪ್ರಕರಣ: ಆಂಧ್ರ ಸಚಿವ, ಎಂಎಲ್​ಎ ಆಪ್ತರು ವಶಕ್ಕೆ

ರೇವ್ ಪಾರ್ಟಿ ಪ್ರಕರಣ: ಆಂಧ್ರ ಸಚಿವ, ಎಂಎಲ್​ಎ ಆಪ್ತರು ವಶಕ್ಕೆ

Spread the love

ಬೆಂಗಳೂರು, ಮೇ.25: ಜಿ.ಆರ್.ಫಾರ್ಮ್ ಹೌಸ್ ರೇವ್ ಪಾರ್ಟಿ (Rave Party) ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಪಾರ್ಟಿಯೊಳಗಿನ ಮೋಜು ಮಸ್ತಿಯ ವಿಡಿಯೋಗಳು ವೈರಲ್ ಆದ್ರೆ, ಸಿಸಿಬಿ (CCB) ಅಧಿಕಾರಿಗಳಿಗಳ ಜೊತೆಗೆ ನಟಿ ಹೇಮಾ ಮಾಡಿದ ಡ್ರಾಮಾ ಕೂಡ ಗೊತ್ತಾಗಿದೆ.

ಇದೆಲ್ಲದರ ನಡುವೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳ ತಲೆದಂಡ ಕೂಡ ಆಗಿದೆ.

ಅಷ್ಟೇ ಅಲ್ಲದೆ ಇದೀಗ ಆಂಧ್ರ ಸಚಿವ ಕಾಕನಿ ಗೋವರ್ಧನ ರೆಡ್ಡಿ (Kakani Govardhan Reddy) ಹಾಘೂ  ಎಂಎಲ್ಎ ಶ್ರೀಕಾಂತ್ ರೆಡ್ಡಿ ಆಪ್ತರನ್ನು ಸಿಸಿಬಿ ವಶಕ್ಕೆ ಪಡೆದಿದೆ.ರೇವ್ ಪಾರ್ಟಿ ಪ್ರಕರಣ: ಆಂಧ್ರ ಸಚಿವ, ಎಂಎಲ್​ಎ ಆಪ್ತರು ವಶಕ್ಕೆ

ಮೇ 19 ರಂದು ಎಲೆಕ್ಟ್ರಾನಿಕ್ ಸಿಟಿ ಹೊರವಲಯದ ಜಿ.ಆರ್.ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಆಯೋಜನೆಯಾಗಿತ್ತು. ಈ ಪಾರ್ಟಿಗೆ ಸಿಸಿಬಿ ತಂಡ ದಾಳಿ ನಡೆಸಿದ್ದು ತೆಲಗು ನಟಿ ಹೇಮಾ, ಆಶಿ‌ ರಾಯ್ ಸೇರಿದಂತೆ ಹಲವು ಸ್ಟಾರ್​ಗಳನ್ನು ವಶಕ್ಕೆ ಪಡೆಯಲಾಗಿತ್ತು.

ಆ ವೇಳೆ ಕಾರೊಂದರಲ್ಲಿ ಎಂಎಲ್​ಎ ಪಾಸ್ ಪತ್ತೆಯಾಗಿತ್ತು. ಸದ್ಯ ಈಗ ಸಚಿವರಾಗಿರುವ ಆಂಧ್ರದ ಕಾಕಾನಿ ಗೋವರ್ಧನ್ ರೆಡ್ಡಿ ಎಂಬ ಎಂಎಲ್​ಎ ಪಾಸ್ ಪತ್ತೆಯಾದ ಹಿನ್ನೆಲೆ ಜಾಡು ಬೆನ್ನತಿದ ಸಿಸಿಬಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.


Spread the love

About Laxminews 24x7

Check Also

ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

Spread the love ಬೆಳಗಾವಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ದಿನವನ್ನು ವಿರೋಧಿಸಿ, ಕಾಂಗ್ರೆಸ್ ಕ್ಷಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ