Breaking News

ಅಕ್ಟೋಬರ್​ 11ಕ್ಕೆ ಮಾರ್ಟಿನ್​ ಸಿನಿಮಾ ರಿಲೀಸ್​ ’: ಧ್ರುವ ಸರ್ಜಾ

Spread the love

ನಟ ಧ್ರುವ ಸರ್ಜಾ ಅವರು ‘ಮಾರ್ಟಿನ್​’ (Martin) ಸಿನಿಮಾಗಾಗಿ ಎರಡೂವರೆ ವರ್ಷಗಳ ಕಾಲ ಮೀಸಲು ಇಟ್ಟಿದ್ದರು. ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಎಂದು ಎಲ್ಲರೂ ಕೇಳುತ್ತಿದ್ದರು.

ಇಂದು (ಮೇ 24) ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ ‘ಮಾರ್ಟಿನ್​’ ಸಿನಿಮಾದ ಬಿಡುಗಡೆ ದಿನಾಂಕವನ್ನು (Martin Release Date) ಘೋಷಿಸಿದ್ದಾರೆ. ಅಕ್ಟೋಬರ್​ 11ರಂದು ಸಿನಿಮಾ ರಿಲೀಸ್​ ಆಗಲಿದೆ.

ಪ್ರೆಸ್​ಮೀಟ್​ನಲ್ಲಿ ಈ ಬಗ್ಗೆ ಧ್ರುವ ಸರ್ಜಾ (Dhruva Sarja) ಮಾತನಾಡಿದರು. ‘ಎರಡೂವರೆ ವರ್ಷ ನಾವು ಈ ಜರ್ನಿ ಮಾಡಿದ್ದೇವೆ. ಒಂದು ಫ್ರೇಮ್​ನಲ್ಲೂ ನಾವು ರಾಜಿ ಆಗಿಲ್ಲ.

ಇದು ತಂತ್ರಜ್ಞರ ಸಿನಿಮಾ. ಇಷ್ಟು ಬೇಗ ಅವರಿಗೆ ಧನ್ಯವಾದ ಹೇಳುತ್ತಾ ನಾನು ಟೈಮ್​ ವೇಸ್ಟ್​ ಮಾಡಲ್ಲ. ನನಗೆ ತುಂಬ ಜವಾಬ್ದಾರಿ ಬಂದಿದ್ದೇ ತಂತ್ರಜ್ಞರ ಕಾರಣದಿಂದ. ಮೊದಲ ಬಾರಿಗೆ ನಮ್ಮ ಅಂಕಲ್​ ಕಥೆ ಮತ್ತು ಚಿತ್ರಕಥೆ ಮಾಡಿದ್ದಾರೆ.

ಅದನ್ನು ನಾನು ಸರಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂಬುದು ಇತ್ತು. ತುಂಬ ಭಯ-ಭಕ್ತಿಯಿಂದ ಕೆಲಸ ಮಾಡಿದ್ದೇವೆ. ಅಕ್ಟೋಬರ್​ 11ರಂದು ಸಿನಿಮಾ ಬಿಡುಗಡೆ ಆಗಲಿದೆ.

ದಯವಿಟ್ಟು ನಿಮ್ಮ ಸ್ನೇಹಿತರಿಗೆಲ್ಲರಿಗೂ ಈ ಬಗ್ಗೆ ಹೇಳಿ’ ಎಂದಿದ್ದಾರೆ ಧ್ರುವ ಸರ್ಜಾ. ಈ ಸಿನಿಮಾಗೆ ಎ.ಪಿ. ಅರ್ಜುನ್​ ನಿರ್ದೇಶನ ಮಾಡಿದ್ದಾರೆ. ಉದಯ್​ ಮೆಹ್ತಾ ಬಂಡವಾಳ ಹೂಡಿದ್ದಾರೆ.


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ