ಕೊಪ್ಪಳ: ರಾಜ್ಯ ಸರ್ಕಾರ ಗ್ಯಾರಂಟಿಗಳ ಅಮಲಿನಲ್ಲಿದೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊಡುತ್ತಿಲ್ಲ. ಗ್ಯಾರಂಟಿ ಬಿಟ್ಟು ರಾಜ್ಯದಲ್ಲಿ ಏನೂ ಇಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್ ರವಿಕುಮಾರ್ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರದ ದಾಹಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ ತಂದರು.ರಾಜ್ಯದಲ್ಲಿ ನೀರಾವರಿ, ಕೈಗಾರಿಕೆ, ಕಂದಾಯ, ಶಿಕ್ಷಣ ಹಳ್ಳಹತ್ತಿ ಹೋಗಿವೆ. ಪೋಷಕರೂ ಸಹ ಆತಂಕದಲ್ಲಿದ್ದಾರೆ.ಸರ್ಕಾರಿ ಕೆಲಸ ಶಿಕ್ಷಕರಿಗೆ ಕೊಡಬೇಡಿ. ಶಿಕ್ಷಣದ ಕೆಲಸ ಮಾತ್ರ ಶಿಕ್ಷಕರಿಗೆ ಕೊಡಿ.ರಾಜ್ಯದ ಯುವ ನಿಧಿ ಒಬ್ಬರಿಗೂ ಕೊಟ್ಟಿಲ್ಲ. 5, 8, 9, ಪಬ್ಲಿಕ್ ಪರೀಕ್ಷೆ ಬೇಡ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯ ಸರ್ಕಾರಕ್ಕೆ ಶಿಕ್ಷಣದ ಬಗ್ಗೆ ಮುನ್ನೋಟವೇ ಇಲ್ಲ. ಶಿಕ್ಷಣ ಸಚಿವರು ಸಿನಿಮಾಲೋಕದಲ್ಲಿ ಹೀರೋ ಆಗಿದ್ದವರು ಇಲ್ಲಿ ಬಂದು ಜೀರೋ ಆಗಿದ್ದಾರೆ ಸಿನಿಮಾ ಹೀರೋ ಇಲ್ಲಿ ಜೀರೋ ಆದರಲ್ಲ ಯಾಕೆ ? ಎಂದು ಸಿಎಂ ಹೇಳಲಿ.ಶಿಕ್ಷಣ ಸಚಿವರಿಗೆ ಶಿಕ್ಷಣದ ಗಂಧ ಗಾಳಿಯು ಗೊತ್ತಿಲ್ಲ ಅವರನ್ನು ಶಿಕ್ಷಣ ಕ್ಷೇತ್ರದಿಂದ ಮುಕ್ತಿ ಮಾಡಲಿ ಎಂದರು.
ಸರ್ಕಾರ ಮಕ್ಕಳ ಶಿಕ್ಷಣದ ಜೊತೆ ಆಟ ಆಡುತ್ತಿದೆ.ವಿವಿಗಳು ಮುಚ್ಚುವ ಪರಿಸ್ಥಿತಿಯಲ್ಲಿ ಇವೆ. 45 ಸಾವಿರ ತರಗತಿಗಳು ಶಿಥಿಲಾವಸ್ಥೆಯಲ್ಲಿವೆ. ಕನ್ನಡ ಮಾತನಾಡಲು ಬರದ ಶಿಕ್ಷಣ ಸಚಿವರ ಬಗ್ಗೆ ಸಿಎಂ ಕ್ರಮ ಕೈಗೊಳ್ಳಬೇಕು ಎಂದರು.
Laxmi News 24×7