Breaking News

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 34ರಷ್ಟು ಏರಿಕೆ

Spread the love

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 34ರಷ್ಟು ಏರಿಕೆ

ಬೆಂಗಳೂರು: ಕರೂರ್‌ ವೈಶ್ಯ ಬ್ಯಾಂಕ್‌ 2023-24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹456 ಕೋಟಿ ನಿವ್ವಳ ಲಾಭ ಗಳಿಸಿದೆ.

2022-23ರ ಇದೇ ಅವಧಿಯಲ್ಲಿ ₹338 ಕೋಟಿ ಲಾಭ ಗಳಿಸಿತ್ತು. ಈ ಲಾಭಕ್ಕೆ ಹೋಲಿಸಿದರೆ ಶೇ 34.9ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಕರೂರ್‌ ವೈಶ್ಯ ಬ್ಯಾಂಕ್‌ ಲಾಭದಲ್ಲಿ ಶೇ 34ರಷ್ಟು ಏರಿಕೆ

ವರಮಾನವು ₹739 ಕೋಟಿಯಿಂದ ₹867 ಕೋಟಿಗೆ ಹೆಚ್ಚಳವಾಗಿದೆ. ನಿವ್ವಳ ಬಡ್ಡಿ ಆದಾಯವು ಶೇ 11.5ರಷ್ಟು ಏರಿಕೆಯಾಗಿದ್ದು, ₹893 ಕೋಟಿಯಿಂದ ₹996 ಕೋಟಿಗೆ ಹೆಚ್ಚಳವಾಗಿದೆ. ಠೇವಣಿಗಳ ವೆಚ್ಚವು ಶೇ 4.61ರಿಂದ ಶೇ 5.36ಕ್ಕೆ ಏರಿಕೆಯಾಗಿದೆ. ಬಡ್ಡಿಯೇತರ ಆದಾಯವು ₹401 ಕೋಟಿಯಿಂದ ₹629 ಕೋಟಿಗೆ ಮುಟ್ಟಿದೆ. ನಿರ್ವಹಣಾ ವೆಚ್ಚವು ₹554 ಕೋಟಿಯಿಂದ ₹757 ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

2023-24ರ ಪೂರ್ಣ ಹಣಕಾಸು ವರ್ಷದಲ್ಲಿ ನಿವ್ವಳ ಲಾಭವು ಶೇ 45ರಷ್ಟು ಏರಿಕೆ ಕಂಡಿದ್ದು, ₹1,106 ಕೋಟಿಯಿಂದ ₹1,605 ಕೋಟಿಗೆ ಹೆಚ್ಚಳವಾಗಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) 87 ಬಿಪಿಎಸ್‌ನಷ್ಟು ಸುಧಾರಿಸಿದೆ. ನಿವ್ವಳ ಎನ್‌ಪಿಎ ಶೇ 1ಕ್ಕಿಂತ ಕಡಿಮೆಯಿದೆ. ಮಾರ್ಚ್‌ ಅಂತ್ಯದ ವೇಳೆಗೆ ದೇಶದಲ್ಲಿ ಬ್ಯಾಂಕ್‌ನ 838 ಶಾಖೆಗಳು ಮತ್ತು 2,262 ಎಟಿಎಂಗಳನ್ನು ಹೊಂದಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಬ್ಯಾಲೆನ್ಸ್‌ ಶೀಟ್‌ ಗಾತ್ರವು ₹90,179 ಕೋಟಿಯಿಂದ ₹1.05 ಲಕ್ಷ ಕೋಟಿಗೆ ಏರಿಕೆಯಾಗಿದೆ. ವ್ಯವಹಾರವು ₹1.40 ಲಕ್ಷ ಕೋಟಿಯಿಂದ ₹1.63 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಬ್ಯಾಂಕ್‌ ₹1.50 ಲಕ್ಷ ಕೋಟಿ ವ್ಯವಹಾರದ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ ಎಂದು ತಿಳಿಸಿದೆ.

‘ನಿರಂತರ ಕಾರ್ಯಕ್ಷಮತೆಯಿಂದಾಗಿ ಹಿಂದಿನ ಆರ್ಥಿಕ ವರ್ಷದಲ್ಲಿ ₹1,605 ಕೋಟಿ ಲಾಭ ಗಳಿಸಿದ್ದೇವೆ. ಸಾಲದ (ಕ್ರೆಡಿಟ್‌) ವೆಚ್ಚವು ಸುಧಾರಿಸಿದೆ. ಬ್ಯಾಂಕ್‌ ತನ್ನ ಸ್ಥಿರವಾದ ವಿಸ್ತರಣೆ, ಆಸ್ತಿ ಗುಣಮಟ್ಟ ಮತ್ತು ಲಾಭದಾಯಕತೆಯನ್ನು ಉಳಿಸಿಕೊಂಡಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಮೇಶ್‌ ಬಾಬು ತಿಳಿಸಿದ್ದಾರೆ.


Spread the love

About Laxminews 24x7

Check Also

DCM ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ : ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಸಿದ CBI

Spread the love ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ