ಬೆಂಗಳೂರು : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣಗೆ ಜಾಮೀನು ಮಂಜೂರು ಆಗಿದೆ.
ಜಾಮೀನು ಸಿಕ್ಕರೂ ರೇವಣ್ಣಗೆ ಸಂಕಷ್ಟ ತಪ್ಪಿಲ್ಲ, ಎಸ್ ಐ ಟಿ ಹೈಕೋರ್ಟ್ ಮೆಟ್ಟಿಲೇರಿದೆ.
ಹೌದು. ಜಾಮೀನು ಪಡೆದಿದ್ದ ಹೆಚ್ ಡಿ ರೇವಣ್ಣಗೆ ವಿಶೇಷ ತನಿಖಾ ತಂಡ ( ಎಸ್ ಐ ಟಿ) ಶಾಕ್ ನೀಡಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ಜಾಮೀನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ. ರೇವಣ್ಣ ಜಾಮೀನು ಆದೇಶ ವಜಾ ಮಾಡುವಂತೆ ಹೈಕೋರ್ಟ್ ಗೆ ಎಸ್ ಐ ಟಿ ಅರ್ಜಿ ಸಲ್ಲಿಸಿದೆ.
ಈ ಹಿನ್ನೆಲೆ ಹೈಕೋರ್ಟ್ ಆದೇಶದ ಬಗ್ಗೆ ಕುತೂಹಲ ಮೂಡಿದೆ. ಹೈಕೋರ್ಟ್ ನಲ್ಲಿ ವಾದ ಮಾಡಲು ರೇವಣ್ಣ ಪರ ವಕೀಲರು ಕೂಡ ಸಜ್ಜಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.