ಇನ್ನು ಮುಂದೆ ಚಾಲನಾ ಪರವಾನಗಿ ಪಡೆಯಲು ಸರ್ಕಾರಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಹೋಗಬೇಕಿಲ್ಲ. ಬದಲಾಗಿ ಖಾಸಗಿ ಸಂಸ್ಥೆಗಳಿಂದಲೂ ಚಾಲನಾ ಪರವಾನಗಿ (Driving Licence New Rules) ಪಡೆಯಬಹುದಾಗಿದೆ. ಸರ್ಕಾರವು ಚಾಲನಾ ಪರವಾನಗಿ ಪಡೆಯುವ ನಿಯಮವನ್ನು (New Rules) ಬದಲಾಯಿಸಿದ್ದು, ಜೂನ್ 1ರಿಂದ ಇದು ಜಾರಿಗೆ ಬರಲಿದೆ.
ಮೊದಲು ಇದು ಆಯ್ದ ನಗರಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಜಾರಿಯಾಗಲಿದೆ.
ಪರಿಸರ ಮಾಲಿನ್ಯ ತಡೆಯುವ ಉದ್ದೇಶದಿಂದ ಸುಮಾರು 9,00,000 ಹಳೆಯ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವುದೂ ಹೊಸ ನಿಯಮಾವಳಿಯ ಗುರಿಗಳಲ್ಲಿ ಒಂದಾಗಿದೆ.
ಅತೀ ವೇಗದ ಚಾಲನೆಗೆ ದಂಡ 1000ರಿಂದ 2000 ರೂ. ಏರಿಕೆ, ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 25,000 ರೂ. ದಂಡ ತೆರಬೇಕಾಗುತ್ತದೆ. ವಾಹನದ ಮಾಲೀಕರ ಡ್ರೈವಿಂಗ್ ನೋಂದಣಿ ಕಾರ್ಡ್ ಅನ್ನು ರದ್ದುಗೊಳಿಸಲಾಗುವುದು ಮತ್ತು ಅಪ್ರಾಪ್ತರು 25 ವರ್ಷ ವಯಸ್ಸಿನವರೆಗೆ ಪರವಾನಗಿ ಪಡೆಯಲು ಸಾಧ್ಯವಾಗುವುದಿಲ್ಲ.
ರಸ್ತೆಗಳು ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ಚಾಲನಾ ಪರವಾನಗಿಗೆ ಅಗತ್ಯವಿರುವ ದಾಖಲಾತಿಗಳನ್ನು ನವೀಕರಿಸಿದೆ. ಹೊಸ ನಿಯಮಗಳು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಚಾಲಕರ ಅವಶ್ಯಕತೆಗಳಿಗೆ ಸ್ಪಂದಿಸುವಂತಿದೆ. ಈ ಬದಲಾವಣೆಯು ಆರ್‌ಟಿಒಗಳಲ್ಲಿ ದೈಹಿಕ ಪರೀಕ್ಷೆಗಳ ಅಗತ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತಿದೆ.