Breaking News

ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ ಬಲಿ

Spread the love

ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮ (Baby Death) ಬಲಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಲತಾಯಿಯೇ 3 ವರ್ಷದ ಮಗುವನ್ನು ಕೊಂದಿದ್ದಾಳೆ (Murder case) ಎನ್ನಲಾಗಿದೆ. ಸಮೃದ್ಧಿ(3) ಮೃತ ದುರ್ದೈವಿ. ಮಲತಾಯಿ ಸಪ್ನಾ ರಾಯಣ್ಣ ನಾವಿ ಎಂಬಾಕೆ ಕೊಲೆ ಆರೋಪ ಎದುರಿಸುತ್ತಿರುವ ಮಲತಾಯಿ ಆಗಿದ್ದಾಳೆ.Baby Death : ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ?

ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಗ್ರಾಮದಲ್ಲಿ ಘಟನೆ ನಡೆದಿದೆ.

ಮಗುವಿನ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ್ದಾಗಿ ಸಮೃದ್ಧಿಯ ಅಜ್ಜಿ ಹಾಗೂ ಚಿಕ್ಕಪ್ಪ ಆರೋಪಿಸಿದ್ದಾರೆ.

ಸಮೃದ್ಧಿ ತಂದೆ ರಾಯಣ್ಣ ಸಿಆರ್‌ಪಿಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೊದಲ ಪತ್ನಿ ನಿಧನದ ನಂತರ ಎರಡನೇ ಮದುವೆಯಾಗಿದ್ದರು. ಇದೀಗ ರಾಯಣ್ಣನ 2ನೇ ಪತ್ನಿ ಸಪ್ನಾ ಎಂಬಾಕೆ ಸಮೃದ್ದಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ರಾಯಣ್ಣ ಹಾಗೂ ಮೊದಲ ಪತ್ನಿ ಭಾರತಿ ನಾವಿ, ಆಕೆಯ ಮಗಳು ಸಮೃದ್ದಿಮೊದಲ ಪತ್ನಿ ಕೊಲೆ ಆರೋಪ ಎದುರಿಸುತ್ತಿರುವ ಕುಟುಂಬ

ಈಗಾಗಲೇ ಮೊದಲ ಪತ್ನಿ ಭಾರತಿ ನಾವಿ ಕೊಲೆ ಆರೋಪವನ್ನು ರಾಯಣ್ಣ ಹಾಗೂ ಆತನ ಕುಟುಂಬಸ್ಥರು ಎದುರಿಸುತ್ತಿದ್ದಾರೆ. ಪತಿ ರಾಯಣ್ಣ ಹಾಗೂ ತಾಯಿ ಶೋಭಾ ಹಾಗೂ ತಂಗಿ ರೂಪಾ ವಿರುದ್ಧ 2021ರಲ್ಲಿ ಮೃತ ಭಾರತಿ ನಾವಿ ಕುಟುಂಬಸ್ಥರು ನಾಗಪುರದ ಕಾರದಾ ಠಾಣೆಯಲ್ಲಿ ದಾಖಲಿಸಿದ್ದಾರೆ. ಆ ಪ್ರಕರಣದಲ್ಲೂ ರಾಯಣ್ಣ ನಾವಿ ಕುಟುಂಬ ಆರೋಪಿಯಾಗಿದ್ದರು. ಅಂದು ತಾಯಿ ಕೊಂದರು, ಇಂದು ಆಕೆಯ ಮಗಳು ಸಮೃದ್ಧಿಯನ್ನೂ ಕೊಂದಿದ್ದಾರೆ ಎಂದು ಮೊದಲ ಪತ್ನಿ ಕುಟುಂಬಸ್ಥರು ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ