ಮೇಷ: ಗೃಹಕೃತ್ಯಗಳಿಗೆ ಅನಿವಾರ್ಯವಾಗಿ ಸಮಯ ನೀಡಿಕೆ. ಹತ್ತಿರದ ದೇವಾಲಯಕ್ಕೆ ಭೇಟಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಮಾಧಾನದ ದಿನ. ದೂರದಲ್ಲಿರುವ ಆತ್ಮೀಯ ಮಿತ್ರರಿಂದ ಶುಭ ಸಮಾಚಾರ.
ವೃಷಭ: ವಿರಾಮ ಆಚರಣೆಯ ನಡುವೆ ಹೊಸ ಕಾರ್ಯಗಳ ಪ್ರಸ್ತಾವ. ಕುಟುಂಬದ ಹಿರಿಯ ಸದಸ್ಯರ ಭೇಟಿ.
ಅನಾಥಾಶ್ರಮ, ವೃದ್ಧಾಶ್ರಮ ಗಳಿಗೆ ಭೇಟಿ. ಹಿರಿಯರು, ಗೃಹಿಣಿಯರಿಗೆ ನೆಮ್ಮದಿಯ ಅನುಭವ. ಬಂಧುವರ್ಗದಲ್ಲಿ ವಿವಾಹ ಮಾತುಕತೆ.
ಮಿಥುನ: ಮನೆಯಲ್ಲಿ ವಿರಾಮದ ಭಾವ. ಉದ್ಯೋಗಸ್ಥರಿಗೆ ಬಾಕಿಯುಳಿದಿರುವ ನಾಳೆಗೆ ಉಳಿದಿರುವ ಕೆಲಸಗಳ ಚಿಂತೆ. ವ್ಯವಹಾರಸ್ಥರಿಗೆ ನಿರಾಳ ಮನೋಭಾವ. ಅವಿವಾಹಿತರಿಗೆ ಬಾಳ ಸಂಗಾತಿ ಲಭಿಸುವ ಚಿಂತೆ. ಮಕ್ಕಳಿಗೆ ಸಮಾಧಾನದ ವಾತಾವರಣ.
ಕರ್ಕಾಟಕ: ಉದ್ಯೋಗಸ್ಥರಿಗೆ ತಾತ್ಕಾಲಿಕ ನೆಮ್ಮದಿ. ವ್ಯವಹಾರ ಕ್ಷೇತ್ರದ ಮಿತ್ರರೊಂದಿಗೆ ಭೇಟಿ. ಉದ್ಯೋಗಾಸಕ್ತ ಶಿಕ್ಷಿತರಿಗೆ ಅವಕಾಶಗಳು ಗೋಚರ. ಮಕ್ಕಳಿಗೆ ವ್ಯಾಸಂಗದಲ್ಲಿ ಸೂಕ್ತ ಮಾರ್ಗದರ್ಶನದ ಏರ್ಪಾಡು.
ಸಿಂಹ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ದೊಡ್ಡ ಮೊತ್ತದ ಲಾಭ. ವ್ಯವಹಾರ ಮತ್ತು ಕಾರ್ಯ ಸುಧಾರಣೆಯ ಚಿಂತೆ. ನೂತನ ಗೃಹ ನಿರ್ಮಾಣ ಪ್ರಗತಿಯಲ್ಲಿ . ವೈದ್ಯರು, ಎಂಜಿನಿಯರರು ಮೊದಲಾದ ವೃತ್ತಿಪರರಿಗೆ ಕೆಲಸದ ಒತ್ತಡ.
ಕನ್ಯಾ: ಎಲ್ಲರ ದೇಹಾರೋಗ್ಯ ಉತ್ತಮ. ಆಯ್ದ ವರ್ಗಗಳ ವ್ಯಾಪಾರಿಗಳಿಗೆ ಉತ್ತಮ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಶುಭ ಸಮಾಚಾರ. ಹೊಸ ರೀತಿಯ ಉದ್ಯಮದ ಕಲ್ಪನೆ ಸಾಕಾರ. ಗೃಹಿಣಿಯರು ಮತ್ತು ಮಕ್ಕಳಿಗೆ ಸಂಭ್ರಮದ ದಿನ.
ತುಲಾ: ದೃಢಸಂಕಲ್ಪದಲ್ಲಿ ಮುಂದುವರಿದರೆ ಜಯ ಖಚಿತ. ದೂರದ ಬಂಧುಗಳ ಕಡೆಯಿಂದ ಶುಭ ಸಮಾಚಾರ. ಬೌದ್ಧಿಕ ಕಾರ್ಯ ಮಾಡುವವರ ಆರೋಗ್ಯದ ಬಗ್ಗೆ ಎಚ್ಚರ. ಮಕ್ಕಳ ಶಾಲಾ ಭವಿಷ್ಯದ ಚಿಂತನೆ.
ವೃಶ್ಚಿಕ: ನೆಮ್ಮದಿಯ ಜೀವನಕ್ಕೆ ಕೊರತೆಯಾಗದು. ಮಹಿಳೆಯರಿಂದ ವಸ್ತ್ರಾಭರಣ ಖರೀದಿ. ವ್ಯವಹಾರಸ್ಥರಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸುಧಾರಣೆ. ಆಸ್ಪತ್ರೆಗೆ ಭೇಟಿಯಿತ್ತು ರೋಗಿ ಗಳಿಗೆ ಸಾಂತ್ವನ. ವ್ಯವಹಾರಾರ್ಥ ಸಣ್ಣ ಪ್ರವಾಸ.
ಧನು: ಗೃಹಸಂಬಂಧಿ ಕಾರ್ಯಗಳಲ್ಲಿ ತಲ್ಲೀನರಾಗುವಿರಿ. ಉದ್ಯಮಿಗಳಿಗೆ ತಾತ್ಕಾಲಿಕ ವಿರಾಮ. ಸಣ್ಣ ಪ್ರವಾಸದ ಸಾಧ್ಯತೆ. ಗೃಹಾಲಂಕಾರದ ಕೆಲಸಗಾರರಿಗೆ ಕೈತುಂಬಾ ಕೆಲಸ ಹಾಗೂ ಸಂಪಾದನೆ. ನೆಂಟರ ಮನೆಗೆ ಭೇಟಿ ನೀಡುವ ಸಾಧ್ಯತೆ.
ಮಕರ: ಸಾವಧಾನದಿಂದ ಮುಂದುವರಿದು ಕಾರ್ಯಸಿದ್ಧಿ. ಪಟ್ಟುಹಿಡಿದು ಕಾರ್ಯ ಸಾಧಿಸಿದ ತೃಪ್ತಿ. ಹಳೆಯ ಒಡನಾಡಿಯಿಂದ ಮತ್ತೂಂದು ಆದಾಯ ಮೂಲದ ಪರಿಚಯ. ಉತ್ತರ ದಿಕ್ಕಿನಲ್ಲಿ ಸಣ್ಣ ಪ್ರಯಾಣದ ಸಾಧ್ಯತೆ.
ಕುಂಭ: ಹೊಸ ಅವಕಾಶಗಳ ಅನ್ವೇಷಣೆ. ಪರಿಸರ ನೈರ್ಮಲ್ಯ ಯೋಜನೆಗಳ ಅನುಷ್ಠಾನದ ನೇತೃತ್ವ. ಸಮಾಜದಲ್ಲಿ ಗೌರವ ಪ್ರಾಪ್ತಿ. ಗೃಹಿಣಿಯರಿಗೆ ಸೊÌàದ್ಯೋಗದಲ್ಲಿ ಆಸಕ್ತಿ. ಆಸ್ಪತ್ರೆ, ಅನಾಥಾಲಯ, ವೃದ್ಧಾಶ್ರಮಕ್ಕೆ ಭೇಟಿ.
ಮೀನ: ಕರ್ಮಕಾರಕನಾದ ಶನಿಯಿಂದ ಸತ್ಕರ್ಮಗಳಿಗೆ ಪ್ರೇರಣೆ. ಗಳಿಕೆಯ ಮಾರ್ಗಗಳು ಸುಲಭದಲ್ಲಿ ಗೋಚರ. ಇಷ್ಟದೇವತಾರ್ಚನೆಯಿಂದ ಸಮಸ್ಯೆಗಳು ದೂರ. ಹಿರಿಯರ ಆರೋಗ್ಯ ಉತ್ತಮ. ಸಂಗಾತಿಯಿಂದ ವ್ಯವಹಾರದಲ್ಲಿ ಸಕ್ರಿಯ ಸಹಕಾರ. ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮ.