Breaking News

ಬಾರಿ ಬರಗಾಲದ ನಡುವೆಯೂ ಕಬ್ಬು ರೈತರ ಕೈ ಹಿಡಿದಿದೆ

Spread the love

ಬೆಳಗಾವಿ: ಈ ಬಾರಿ ಬರಗಾಲದ ನಡುವೆಯೂ ಕಬ್ಬು ರೈತರ ಕೈ ಹಿಡಿದಿದೆ. ಇಳುವರಿಯೂ ಹೆಚ್ಚಳವಾಗಿದೆ. ಎಫ್‌ಆರ್‌ಪಿ ಕೂಡ ಏರಿಕೆಯಾಗಿದ್ದರಿಂದ ಬೆಳೆಗಾರರ ಜೇಬು ಭರ್ತಿಯಾಗಿದೆ.

ರಾಜ್ಯದಲ್ಲಿ ಈ ಹಂಗಾಮಿನಲ್ಲಿ 76 ಕಾರ್ಖಾನೆಗಳು ಕಬ್ಬು ನುರಿಸಿವೆ. ಏಪ್ರಿಲ್‌ 30ರ ವರೆಗೆ 586 ಲಕ್ಷ ಟನ್‌ ಕಬ್ಬು ನುರಿಸಲಾಗಿದೆ.ಬೆಳಗಾವಿ | ಹೆಚ್ಚಿದ ಇಳುವರಿ: ಬರದಲ್ಲೂ ಕೈ ಹಿಡಿದ ಕಬ್ಬು

ಒಟ್ಟು 52.91 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದಿಸಲಾಗಿದ್ದು, 9.04 ರಿಕವರಿ ಬಂದಿದೆ.

2023ರಲ್ಲಿ 600 ಲಕ್ಷ ಮೆಟ್ರಿಕ್‌ ಟನ್‌ ಮತ್ತು 2022ರಲ್ಲಿ 600 ಲಕ್ಷ ಟನ್‌ ಕಬ್ಬು ನುರಿಸಲಾಗಿತ್ತು.

‘ಹೆಚ್ಚು ಪ್ರಮಾಣದಲ್ಲಿ ಕಬ್ಬು ಬೆಳೆಯುವ ಬೆಳಗಾವಿ, ಬಾಗಲಕೋಟೆ, ಬೀದರ್, ಮಂಡ್ಯ, ವಿಜಯಪುರ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಕೈ ಹಿಡಿದಿದೆ. ಬರಗಾಲಕ್ಕೂ ಮುಂಚೆಯೇ ಕಬ್ಬಿನಲ್ಲಿ ಸಕ್ಕರೆ ಅಂಶ ಕಟ್ಟಿತ್ತು. ಹಾಗಾಗಿ, ಬರ ಕಾಣಿಸಿಕೊಂಡರೂ ಇಳುವರಿ ಕುಸಿದಿಲ್ಲ. ಇದು ನಮಗೆ ಅಚ್ಚರಿ ಮೂಡಿಸಿದೆ’ ಎಂದು ಸಕ್ಕರೆ ಆಯುಕ್ತ ಎಂ.ಆರ್‌. ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಖಾನೆಗಳು ರೈತರಿಗೆ ಒಟ್ಟು ₹19,899.14 ಕೋಟಿ ಪಾವತಿಸಬೇಕಿದೆ. ಈ ಪೈಕಿ ಮೇ 15ರ ವರೆಗೆ ₹19,294.78 ಕೋಟಿ (ಶೇ 97ರಷ್ಟು) ಪಾವತಿಸಲಾಗಿದೆ. ಇನ್ನೂ ₹604.36 ಕೋಟಿ ಬಾಕಿ ಇದೆ. 15 ದಿನಗಳಲ್ಲಿ ಪಾವತಿ ಆಗುವ ನಿರೀಕ್ಷೆಯಿದೆ. ವಿಳಂಬ ಮಾಡುವ ಕಾರ್ಖಾನೆಗಳಿಗೆ ನೋಟಿಸ್‌ ನೀಡಲಾಗುವುದು’ ಎಂದರು.

ಹೆಚ್ಚು ಕಬ್ಬು ನುರಿಸಿದ ಜಿಲ್ಲೆಗಳು:

ಬೆಳಗಾವಿ ಜಿಲ್ಲೆಯಲ್ಲಿ 28 ಕಾರ್ಖಾನೆಗಳಿದ್ದು 2.06 ಕೋಟಿ ಟನ್‌ ಕಬ್ಬು ನುರಿಸಿವೆ. 19.70 ಲಕ್ಷ ಟನ್‌ ಉತ್ಪಾದನೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 13 ಕಾರ್ಖಾನೆಗಳಿವೆ. 1.73 ಕೋಟಿ ಟನ್‌ ಕಬ್ಬು ನುರಿಸಿದ್ದು, 15.41 ಲಕ್ಷ ಟನ್‌ ಉತ್ಪಾದಿಸಿವೆ. ಈ ಎರಡೂ ಜಿಲ್ಲೆಗಳಲ್ಲಿ ಶೇ 97ರಷ್ಟು ಹಣ ಪಾವತಿಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿರುವ 9 ಕಾರ್ಖಾನೆಗಳು, 58.10 ಲಕ್ಷ ಟನ್‌ ಕಬ್ಬು ನುರಿಸಿವೆ. 5.27 ಲಕ್ಷ ಟನ್‌ ಉತ್ಪಾದಿಸಿದ್ದು, ಶೇ 91ರಷ್ಟು ಹಣ ಪಾವತಿಸಿವೆ.

ಮಂಡ್ಯ ಜಿಲ್ಲೆಯಲ್ಲಿ 5 ಕಾರ್ಖಾನೆಗಳಿವೆ. 30.90 ಲಕ್ಷ ಟನ್‌ ಕಬ್ಬು ನುರಿಸಿದ್ದು, 2.71 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿವೆ. ಶೇ 100ರಷ್ಟು ಹಣ ಪಾವತಿಸಿವೆ.

ಬೀದರ್‌ ಜಿಲ್ಲೆಯಲ್ಲಿರುವ 5 ಕಾರ್ಖಾನೆಗಳು, 17.81 ಲಕ್ಷ ಟನ್‌ ಕಬ್ಬು ನುರಿಸಿವೆ. 1.61 ಲಕ್ಷ ಟನ್‌ ಉತ್ಪಾದಿಸಿವೆ. ಕಲಬುರಗಿ ಜಿಲ್ಲೆಯ 4 ಕಾರ್ಖಾನೆಗಳು 33.42 ಲಕ್ಷ ಟನ್‌ ಕಬ್ಬು ನುರಿಸಿದ್ದು. 2.74 ಲಕ್ಷ ಟನ್‌ ಉತ್ಪಾದನೆ ಮಾಡಿವೆ.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ