ಮುಂಡರಗಿ: ಶಾಕ್ ನಿಂದ ವಿದ್ಯುತ್ ದುರಸ್ತಿ ಮಾಡುತ್ತಿದ್ದ ಕೂಲಿಕಾರ ಮೃತಪಟ್ಟ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅಂಭಾಭವಾನಿ ನಗರದಲ್ಲಿ ಮೇ. 15ರ ಬುಧವಾರ ಮಧ್ಯಾಹ್ನ ನಡೆದಿದೆ.
ವಿದ್ಯುತ್ ದುರಸ್ತಿ ಕೂಲಿಕಾರ ಅಜ್ಜಯ್ಯ ವೀರಯ್ಯ ಹಿರೇಮಠ (46) ಮೃತಪಟ್ಟ ವ್ಯಕ್ತಿ.
ಹೆಸ್ಕಾಂನ ವಿದ್ಯುತ್ ದುರಸ್ತಿಗಾಗಿ ಕೂಲಿಕಾರ ಅಜ್ಜಯ್ಯ ವಿದ್ಯುತ್ ಕಂಬಕ್ಕೆ ಏರಿದ್ದ ಸಂದರ್ಭ ಶಾಕ್ ಹೊಡೆದ ಪರಿಣಾಮ ಕಂಬದ ಮೇಲಿಂದ ಬಿದ್ದು, ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7