ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಆಗಮನದ ಮೊದಲ ಹಂತದಲ್ಲಿಯೇ ಭಾರೀ ಪ್ರಮಾಣದಲ್ಲಿ ಅನಾಹುತವನ್ನೇ ಸೃಷ್ಟಿ ಮಾಡಿದೆ. ಮುಂಬಯಿ ವಿಮಾನ ನಿಲ್ದಾಣ, ಬೊರಿವಿಲಿ, ನವೀ ಮುಂಬಯಿ ಸೇರಿದಂತೆ ವಾಣಿಜ್ಯ ರಾಜಧಾನಿಯ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ.
ಮುಂಬಯಿನ ಘಾಟ್ಕೊàಪರ್‌ನಲ್ಲಿ ಬೃಹತ್ ಪ್ರಮಾಣದ ಜಾಹೀರಾತು ಫಲಕ ಕುಸಿದು 8 ಮಂದಿ ಅಸುನೀಗಿದ್ದಾರೆ. ಮತ್ತೂಂದೆಡೆ ಬೃಹತ್ ಪ್ರಮಾಣದ ಟವರ್ ಗಾಳಿಯ ರಭಸಕ್ಕೆ ಪೆಟ್ರೋಲ್ ಬಂಕ್‌ನ ಮೇಲೆ ಬ್ದಿದಿದೆ. ಘಟನೆಯಲ್ಲಿ 59 ಮಂದಿ ಗಾಯಗೊಂಡಿದ್ದಾರೆ. ಜತೆಗೆ ಅದರ ಎಡೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ 100 ಮಂದಿಯ ಪೈಕಿ 67 ಮಂದಿಯನ್ನು ರಕ್ಷಿಸಲಾಗಿದೆ. ಛೆಡ್ಡಾನಗರ ಜಿಮ್‌ಖಾನಾ ಎಂಬಲ್ಲಿ ಅನಾಹುತ ಉಂಟಾಗಿದೆ. ರಕ್ಷಣ ಕಾರ್ಯಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ದಳದ ಸಿಬಂದಿಯನ್ನು ಕರೆಯಿಸಿಕೊಳ್ಳಲಾಗಿದೆ.

ಬೃಹತ್ ಪ್ರಮಾಣದ ಕಬ್ಬಿಣದ ಟವರ್ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದ ಕಾರುಗಳ ಮೇಲೆಯೂ ಬಿದ್ದಿದೆ. ಇದರಿಂದಾಗಿ ಕೆಲವು ವಾಹನಗಳು ನಜ್ಜುಗುಜ್ಜಾಗಿವೆ. ಘಟನೆಗೆ ಸಂಬಂಧಿಸಿದಂತೆ ಆಘಾತ ವ್ಯಕ್ತಪಡಿಸಿದ ಡಿಸಿಎಂ ದೇವೇಂದ್ರ ಫಡ್ನವೀಸ್ ಟವರ್ ಮುರಿದು ಬಿದ್ದ ಬಗ್ಗೆ ತನಿಖೆ ನಡೆಸುವುದಾಗಿ ಟ್ವೀಟ್ ಮಾಡಿದ್ದಾರೆ.
ಒಟ್ಟಾರೆ ಭಾರೀ ಮಳೆಯ ತೀವ್ರತೆಗೆ ವಾಣಿಜ್ಯ ನಗರಿ ನಲುಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ.
ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ಗಾಳಿ ಸಹಿತ ಮಳೆಯಾದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬಯಿ ಮೆಟ್ರೋದ ಹಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರ ಜತೆಗೆ ಮುಂಬಯಿ ನಾಗರಿಕರ ಜೀವನಾಡಿಯಾಗಿರುವ ಸ್ಥಳೀಯ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು.
Laxmi News 24×7