ಬೆಳಗಾವಿ: ಗೋವಾದಿಂದ ಆಂಧ್ರಪ್ರದೇಶದ ಕ್ಕೆ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಮದ್ಯವನ್ನು ಯಮಕನಮರಡಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು ಮಹಾರಾಷ್ಟ್ರದ ಸಂತೋಷ ಹಲಸೆ ಹಾಗೂ ಸದಾಶಿವ ಗೇರಡೆ ಎಂದು ತಿಳಿದು ಬಂದಿದೆ.
ಗೋವಾದಿಂದ ಆಂಧ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಯಮಕನಮರಡಿ ಪೊಲೀಸರು ತಡೆದು 28 ಲಕ್ಷ ಮೌಲ್ಯದ 16848 ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದಾರೆ.
ಲಾರಿಯಲ್ಲಿ ಹಾರ್ಡ್‌ವೇರ್ ಸಾಮಗ್ರಿಗಳಿವೆ ಎಂದು ಸುಳ್ಳು ದಾಖಲೆ ತೋರಿಸಿ ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು,ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.