ಸಂಬರಗಿ: ಹಿಂಬದಿಯ ಟಯರ್ ಒಡೆದ ಕಾರಣ ಕ್ರೂಸರ್ ಪಲ್ಟಿಯಾಗಿ ಮೂವರು ಮೃತಪಟ್ಟು, ಐವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜತ್ತ-ಸಾಂಗೋಲಾ ರಾಜ್ಯ ಹೆದ್ದಾರಿಯ ಸೋನಂದ್ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಾಳಿಗೆರೆ ಗ್ರಾಮದ ಗೀತಾ ರವೀಂದ್ರ ದೊಡಮನಿ (36), ಮಹಾದೇವಿ ಶ್ರೀಶೈಲ ಚೌಗಲಾ (40) ಹಾಗೂ ಮಲಾಬಾದ ಗ್ರಾಮದ ಕಸ್ತೂರಿ ಶಂಕರ ಭಿರಡಿ (50) ಮೃತಪಟ್ಟವರು.
ಬರಗಾಲ ಹಿನ್ನೆಲೆಯಲ್ಲಿ ಗಡಿಗ್ರಾಮದ ಜನರು ನಿತ್ಯ ದ್ರಾಕ್ಷಿ ತೋಟದಲ್ಲಿ ಕೆಲಸಕ್ಕೆಂದು ಮಹಾರಾಷ್ಟ್ರದ ಸಾಂಗೋಲಾ ತಾಲೂಕಿನ ಕಾಸೇಗಾವ ಗ್ರಾಮಕ್ಕೆ ತೆರಳುತ್ತಿದ್ದರು. ಗಾಯಾಳುಗಳನ್ನು ಸಾಂಗೋಲಾ ಸರಕಾರಿ ಆಸ್ಪತ್ರೆ ಹಾಗೂ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.