ಬೆಳಗಾವಿ: ಬಿಸಿಲಿನಿಂದ ಬಸವಳಿದಿದ್ದ ಬೆಳಗಾವಿ ಜನತೆಗೆ ಶನಿವಾರ ಮಳೆರಾಯ ತಂಪೆರೆದಿದ್ದು, ಮಳೆ ಆಗಮನದಿಂದ ಜನರು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.
ಬರದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆಗಮನದಿಂದ ಸಾರ್ವಜನಿಕರು ಸಮಾಧಾನವಾಗಿದ್ದಾರೆ.
ಭಾರೀ ಮಳೆ ಆಗಮನದಿಂದ ಇಳೆ ತಂಪಾಗಿದ್ದು, ರೈತರ ಮೊಗದಲ್ಲಿ ಸಂತಸವಾಗಿದೆ. ಈ ವರ್ಷದ ಅತ್ಯಂತ ಜೋರಾದ ಮಳೆ ಸುರಿದಿದೆ.
ಮಧ್ಯಾಹ್ನ 4 ಗಂಟೆ ನಂತರ ನಗರದಲ್ಲಿ ಆರಂಭವಾದ ಬಿರುಗಾಳಿ-ಮಳೆಗೆ ಜನರು ಪರದಾಡಿದರು. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಸುರಿಯಿತು. ಜೋರಾಗಿ ಬೀಸಿದ ಬಿರುಗಾಳಿಯಿಂದ ಗಿಡದ ಟೊಂಗೆಗಳು ಮುರಿದು ಬಿದ್ದವು. ಗುಡುಗು-ಸಿಡಿಲು ಸಹಿತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಭೇಂಡಿ ಬಜಾರ್‌ನಲ್ಲಿ ಗಿಡವೊಂದು ಧರೆಗುರುಳಿದೆ.