Breaking News

ಭಿಕ್ಷುಕಿಯ ಮಗು ಅಪಹರಣ.. ಮಹಿಳೆ ಕಣ್ಣೀರು!

Spread the love

ಳ್ಳಾರಿ:- ಭಿಕ್ಷುಕ (ಬಡ) ಮಹಿಳೆಯ ಮಗು ಅಪಹರಣವಾಗಿರುವ ಘಟನೆ ಬಳ್ಳಾರಿ ನಗರದ ರೈಲ್ವೆ ಸ್ಟೇಷನ್ ಬಳಿ ಜರುಗಿದೆ.

ಬಿಬಿಫಾತಿಮಾ ಎಂಬ ಮಹಿಳೆಯ ಮಗು ಅಪಹರಣವಾಗಿದೆ ಎಂದು ತಿಳಿದು ಬಂದಿದೆ.ಒಂದು ವರ್ಷ ಮೂರು ತಿಂಗಳ ವಯಸ್ಸಿನ ಆಯನ್ ಗಂಡು ಮಗು ಅಪಹರಣವಾಗಿದೆ. ಏ.28 ರಾತ್ರಿ ಮಗು ಆಯನ್ ಅಪಹರಣವಾಗಿದೆ ಎನ್ನಲಾಗಿದೆ.

ಮಗು ಹುಡುಕಿಕೊಡುವಂತೆ ಮಹಿಳೆ ದೂರು ನೀಡಿದ್ದು, ಪೋಲಿಸ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ. ಎರಡು ತಿಂಗಳಿನಿಂದ ಭಿಕ್ಷಾಟನೆ ಮಾಡಿ ಬಿಬಿಫಾತಿಮಾ ಜೀವನ ನಡೆಸುತ್ತಿದ್ದರು. ಮನೆ ಬಾಡಿಗೆ ಕಟ್ಟಲಾಗದೆ ರೈಲ್ವೆ ಸ್ಟೇಷನ್ ಬಳಿ ಮಹಿಳೆ ಜೀವನ ಸಾಗಿಸುತ್ತಿದ್ದರು.

ಬಳ್ಳಾರಿ ನಗರದ ಕೌಲಬಜಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ಮಹಿಳೆ ವಾಸ ಮಾಡುತ್ತಿದ್ದಳು. ಹಾಟ್೯ ಪ್ರಾಬ್ಲಮ್ ಹಿನ್ನಲೆ, ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಬಿಬಿಫಾತಿಮಾಳ ಪತಿ ವಾಸವಾಗಿದ್ದಾರೆ. ಮನೆಯಲ್ಲಿ ದುಡಿಯುವವರು ಇಲ್ಲದ ಕಾರಣ ಬಿಬಿಫಾತಿಮಾ ಭಿಕ್ಷಾಟನೆ ಮಾಡುತ್ತಿದ್ದರು.

ಬಾಡಿಗೆ ಕಟ್ಟಲಾಗದೆ ಮನೆಯಿಂದ ಮಹಿಳೆ ಹೊರ ಬಂದಿದಳು. ಭಿಕ್ಷಾಟನೆ ಜೊತೆ ಪೆಪರ್, ಬಾಟಲ್ ಆರಿಸುವ ಕೆಲಸ ಮಾಡುತ್ತಿದ್ದಳು. ಇದರಿಂದ ಬಂದ ಹಣದಲ್ಲಿ ಬಿಬಿಫಾತಿಮಾ ಮಗು ಸಾಕುತ್ತಿದ್ದರು. ವಾರದ ಹಿಂದೆ ಭಿಕ್ಷಾಟನೆ ಜೊತೆಗೆ ಪೆಪರ್ ಆರಿಸುವ ಕೆಲ್ಸಾ ಮುಗಿಸಿ ಮಗುವಿನೊಂದಿಗೆ ಬಿಬಿಫಾತಿಮಾ ಮಲಗಿದ್ದರು.

ರೈಲ್ವೆ ಸ್ಟೇಷನ್ ಮುಂಭಾಗದ ಧ್ವಜ ಸ್ತಂಭದ ಜಾಗೆಯಲ್ಲಿ ಮಗುವಿನೊಂದಿಗೆ ಮಲಗಿದ್ದಾಗ ಇದ್ದಕ್ಕಿದ್ದಂತೆ ಮಗು ಕಿಡ್ನಾಪ್ ಆಗಿದೆ.

ಮಗು ಹುಡುಕಿಕೊಡುವಂತೆ ಮಹಿಳೆ ಕಣ್ಣೀರು ಹಾಕಿದ್ದಾರೆ. ಆ ಜಾಗೆಯಲ್ಲೆ ಸುಭಾನಿ ಎಂಬ ಇನ್ನೊಬ್ಬ ಭಿಕ್ಷುಕ ಮಲಗಿದ್ದ ಎನ್ನಲಾಗಿದೆ. ಮಗು ಆಯನ್, ಸುಭಾನಿ ಜೊತೆಗೆ ಆಟವಾಡುತ್ತಿತ್ತು. ಆತನೆ ಮಗು ಅಪಹರಣ ಮಾಡಿದ್ದಾನೆ ಅಂತಾ ಮಹಿಳೆ ದೂರು ನೀಡಿದ್ದಾರೆ. ಮಗು ಕಳೆದುಕೊಂಡ ಬಿಬಿಫಾತಿಮಾ ಪರದಾಟ ನಡೆಸಿದ್ದಾರೆ. ತನ್ನ ಮಗು ಹುಡುಕಿಕೊಡುವಂತೆ ಕಣ್ಣೀರಿಡುತ್ತಾ ಜನ್ರ ಬಳಿ, ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ