Breaking News

ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ’: ಕೆ.ಎಂ.ಶಿವಲಿಂಗೇಗೌಡ

Spread the love

ಹಾಸನ: ದೇಶ ಆಳಿದ ಕುಟುಂಬ ಸದಸ್ಯನಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ದುಷ್ಕೃತ್ಯ ನಡೆದಿರುವುದು ನಮಗೂ ಬೇಸರ ತರಿಸಿದೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದ ಪ್ರಜ್ವಲ್‌ ರೇವಣ್ಣ ಪ್ರಕರಣ ಹಾಗೂ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್‌ ಹಂಚಿಕೆ ಆರೋಪ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ ಹಾಗೂ ರಾಜ್ಯ ಸರ್ಕಾರದ ಬಗ್ಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಟೀಕೆ, ಆರೋಪ ಹೊರಿಸುವುದನ್ನು ನಿಲ್ಲಿಸಬೇಕು.

Hasana: "ದೇಶ ಆಳಿದ ಕುಟುಂಬ ಸದಸ್ಯನ ದುಷ್ಕೃತ್ಯ ಬೇಸರ ತರಿಸಿದೆ': ಕೆ.ಎಂ.ಶಿವಲಿಂಗೇಗೌಡ

ಇಲ್ಲದಿದ್ದರೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಸದರಿಂದ ಲೈಂಗಿಕ ಹಗರಣ ಜಿಲ್ಲೆಯಲ್ಲಿ ನಡೆದದ್ದು ಬೇಸರ ತರಿಸಿದೆ. ಇದು ಹಾಸನ ಜಿಲ್ಲೆಗೆ ಕಳಂಕ ಆಗಿರುವುದರ ಬಗ್ಗೆ ಪ್ರತಿಯೊಬ್ಬರೂ ಪಕ್ಷಬೇಧ ಮರೆತು ಖಂಡಿಸಬೇಕು. ತನಿಖೆಯಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡುತ್ತಿದೆ, ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೈವಾಡ ಇದೆ ಎಂದು ಆಪಾದನೆ ಮಾಡುವುದು ಸರಿಯಲ್ಲ ಎಂದರು.


Spread the love

About Laxminews 24x7

Check Also

ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ; ಅಜೀತ್ ಸಿದ್ಧನ್ನವರ

Spread the love ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ