ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ಕಿರುತೆರೆ ನಟಿ ಜ್ಯೋತಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಇದನ್ನು ಹಂಚಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಕೆಲ ಖಾತೆಗಳಲ್ಲಿ ನಟಿ ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ.
ʼಎಡಿಟ್ ಬೈ ಅಭಿʼ ಎನ್ನುವ ಎಕ್ಸ್ ಖಾತೆಯಲ್ಲಿ ಜ್ಯೋತಿ ರೈ ಅವರ ಫೋಟೋವೊಂದನ್ನು ಹಂಚಿಕೊಂಡು ಅದರ ಕೆಳಗೆ ಜ್ಯೋತಿ ಅವರ ವಿಡಿಯೋ ವೈರಲ್ ಮಾಡುವುದಾಗಿ ಹೇಳಿಕೊಂಡಿದ್ದಾನೆ.
ಇದು ನಕಲಿ ವಿಡಿಯೋ ಎನ್ನಲಾಗಿದೆ. ಪ್ರಜ್ವಲ್ ರೇವಣ್ಣ ಅವರ ಹ್ಯಾಷ್ ಟ್ಯಾಗ್ ಬಳಸಿಕೊಂಡು ಫೋಟೋವನ್ನು ಹಂಚಿಕೊಳ್ಳಲಾಗಿದೆ. ಇದಲ್ಲದೆ ವಿಡಿಯೋ ಬೇಕಾದರೆ ಮೊದಲು ಸಬ್ ಸ್ಕ್ರೈಬ್ ಮಾಡಿಯೆಂದು ಖಾತೆಯಲ್ಲಿ ಬರೆಯಲಾಗಿದೆ.

ತನ್ನ ನಕಲಿ ಅಶ್ಲೀಲ ವಿಡಿಯೋದಿಂದ ನೊಂದಿರುವ ನಟಿ ಜ್ಯೋತಿ ರೈ ಈ ಬಗ್ಗೆ ಪತ್ರವೊಂದನ್ನು ಬರೆದಿದ್ದಾರೆ.
“ನನಗೆ ಅಪರಿಚಿತ ವ್ಯಕ್ತಿಗಳಿಂದ ಕೆಲವೊಂದು ಸಂದೇಶಗಳು ಬರುತ್ತಿವೆ. ಇದರಿಂದ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಇಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. ಇದರಿಂದ ನನ್ನ ಕುಟುಂಬದ ಮಾನ ಹಾಗೂ ಗೌರವ ಅಪಾಯದಲ್ಲಿದೆ. ಕ್ರಮ ಕೈಗೊಳ್ಳದಿದ್ದರೆ ಕುಟುಂಬಕ್ಕೆ ಧಕ್ಕೆ ಆಗುತ್ತದೆ. ತನಿಖೆಗೆ ಅನುಕೂಲವಾಗಲು ಯೂಸರ್ ಐಡಿಗಳನ್ನು ಹಾಕಿದ್ದೇನೆ” ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.
ಈ ಬಗ್ಗೆ ಜ್ಯೋತಿ ರೈ ತನಗೆ ಕೆಲವರು ಕಿರುಕುಳ ನೀಡುತ್ತಿದ್ದಾರೆಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.
ಕನ್ನಡ ಸೇರಿದಂತೆ ದಕ್ಷಿಣದ ಭಾಷೆಯ ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಜ್ಯೋತಿ ರೈ. ʼಬಂದೆ ಬರತಾವ ಕಾʼ ಧಾರಾವಾಹಿಯಲ್ಲಿ ನಟಿಸಿ, ಆ ಬಳಿಕ ‘ಜೋಗುಳ’, ‘ಮೂರುಗಂಟು’, ‘ಕಿನ್ನರಿ’, ‘ಲವಲವಿಕೆ’, ‘ಕನ್ಯಾದಾನ’, ‘ಪ್ರೇರಣಾ’ ಮುಂತಾದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕಿರುತೆರೆ ಮಾತ್ರವಲ್ಲದೆ ʼಸೀತಾರಾಮ ಕಲ್ಯಾಣʼ, ʼಗಂಧದ ಗುಡಿʼ, ʼ99ʼ ʼವರ್ಣಪಟಲʼ ಮುಂತಾದ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ತೆಲುಗಿನ ಕಿರುತೆರೆಯಲ್ಲೂ ಜ್ಯೋತಿ ಅವರು ಕಾಣಿಸಿಕೊಂಡಿದ್ದಾರೆ.
ಜ್ಯೋತಿ ರೈ ನಿರ್ದೇಶಕ ಸುಕು ಪೂರ್ವಜ್ ಅವರೊಂದಿಗೆ ಇತ್ತೀಗಷ್ಟೇ ವಿವಾಹವಾಗಿದ್ದಾಗಿ ಹೇಳಿಕೊಂಡಿದ್ದರು. ಈ ಹಿಂದೆ ಜ್ಯೋತಿ ಪದ್ಮನಾಭ ಎನ್ನುವವರನ್ನು ಮದುವೆಯಾಗಿದ್ದರು.
Laxmi News 24×7