Breaking News

ಗಗನಕ್ಕೇರಿದ ತರಕಾರಿಗಳ ಬೆಲೆ! ಸಸ್ಯಾಹಾರಿ ಊಟದ ಬೆಲೆ 8% ಏರಿಕೆ, ಅಗ್ಗವಾದ ಮಾಂಸಾಹಾರಿ ಊಟ

Spread the love

ರಕಾರಿಗಳ ಬೆಲೆ ಇತ್ತೀಚಿನ ದಿನಗಳಲ್ಲಿ ಗಗನಕ್ಕೇರುತ್ತಿದ್ದು ಅದರಲ್ಲೂ ದಿನ ನಿತ್ಯದ ಬಳಕೆಯ ತರಕಾರಿಗಳು ಎಂದೆನಿಸಿರುವ ಟೊಮೇಟೊ ಹಾಗೂ ಈರುಳ್ಳಿಯ ಬೆಲೆ ಏರಿಕೆಯಿಂದಾಗಿ ಸಸ್ಯಾಹಾರಿ ಊಟದ ಬೆಲೆ 8% ದಷ್ಟು ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸಸ್ಯಾಹಾರಿ ಊಟದ ಬೆಲೆ ಏರಿಕೆಯಿಂದಾಗಿ ಇದೀಗ ಮಾಂಸಾಹಾರಿ ಊಟದ ಬೆಲೆ ತಗ್ಗಿದ್ದು ಬೆಲೆ ಏರಿಕೆಯ ಬಿಸಿ ತರಕಾರಿಗಳ ಮೇಲೆ ಅಗಾಧವಾಗಿ ಪರಿಣಾಮ ಬೀರಿದೆ ಎಂಬುದು ತಿಳಿದು ಬರುತ್ತದೆ.

ವರ್ಷದಿಂದ ವರ್ಷಕ್ಕೆ ತರಕಾರಿಗಳ ಬೆಲೆ ಏರಿಕೆಯಾಗುತ್ತಿದ್ದು ಇದರಿಂದ ಹೋಟೆಲ್‌ಗಳಲ್ಲಿ ಸಸ್ಯಾಹಾರಿ ಊಟೋಪಚಾರಗಳ ಬೆಲೆ ಕೂಡ ಅಧಿಕವಾಗುತ್ತಿದೆ.

ಸಸ್ಯಾಹಾರಿಗಳಿಗೆ ಬೆಲೆ ಏರಿಕೆಯ ಬಿಸಿ

ಬೆಲೆ ಏರಿಕೆಯ ಬಿಸಿಯಿಂದಾಗಿ ಸಸ್ಯಾಹಾರಿಗಳು ತತ್ತರಿಸಿದ್ದು, ದಿನನಿತ್ಯದ ತರಕಾರಿಗಳ ಬೆಲೆಯೇ ಇನ್ನಿತರ ತರಕಾರಿಗಳಿಗಿಂತ ಏರಿಕೆ ಕಂಡಿದ್ದು, ಇನ್ನು ಮುಂದಿನ ಕಥೆ ಏನು ಎಂಬ ಪ್ರಶ್ನೆ ಕಾಡಿದೆ. ಈ ನಡುವೆ ಮಾಂಸಾಹಾರಿಗಳಿಗೆ ಒಳ್ಳೆಯ ಸುದ್ದಿ ಇದ್ದು, ಮಾಂಸದ ಬೆಲೆ ಇಳಿಕೆಯಿಂದಾಗಿ ಮಾಂಸದೂಟದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ವರದಿ ಏನು ಹೇಳಿದೆ? ದಿನನಿತ್ಯದ ತರಕಾರಿ ಬೆಲೆ ಕೂಡ ಸಿಕ್ಕಾಪಟ್ಟೆ ಹೆಚ್ಚಾಗಿದೆ

ಕ್ರಿಸಿಲ್ ಮಾರ್ಕೆಟ್ ಇಂಟೆಲಿಜೆನ್ಸಿ ಹಾಗೂ ಅನಾಲಿಸಿಸ್ ನಡೆಸಿರುವ ಮಾಸಿಕ ರೋಟಿ ರೈಸ್ ರಿಪೋರ್ಟ್‌ನ್ನಾಧರಿಸಿ ಈ ಅಂಕಿ ಅಂಶಗಳು ಬಿಡುಗಡೆಯಾಗಿದ್ದು, ಸಸ್ಯಾಹಾರಿ ಊಟದ ಬೆಲೆ ಏರಿಕೆಯಿಂದಾಗಿ ಸಸ್ಯಾಹಾರಿಗಳು ಬೆಲೆ ಏರಿಕೆಯ ಬಿಸಿ ಅನುಭವಿಸುವಂತಾಗಿದೆ ಎಂದು ತಿಳಿಸಿದೆ.


Spread the love

About Laxminews 24x7

Check Also

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

Spread the love ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ