Breaking News

ಭಾರತ ಸೇರಿ ಏಳು ರಾಷ್ಟಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ -ಶ್ರೀಲಂಕಾ ತೀರ್ಮಾನ

Spread the love

ಕೊಲಂಬೊ (ಪಿಟಿಐ): ಭಾರತ ಸೇರಿದಂತೆ ಏಳು ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಶುಲ್ಕರಹಿತವಾಗಿ ಪ್ರವಾಸಿ ವೀಸಾ ನೀಡಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರ ಮಂಗಳವಾರ ಪ್ರಕಟಿಸಿದೆ.

ಭಾರತವಲ್ಲದೆ ಚೀನಾ, ರಷ್ಯಾ, ಜಪಾನ್‌, ಮಲೇಷ್ಯಾ, ಥಾಯ್ಲೆಂಡ್, ಇಂಡೊನೇಷ್ಯಾ ರಾಷ್ಟ್ರಗಳ ಪ್ರವಾಸಿಗಳಿಗೆ ಶುಲ್ಕರಹಿತವಾಗಿ ವೀಸಾ ಸೇವೆ ನೀಡಲಾಗುತ್ತದೆ ಎಂದು ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ.’ವಿದೇಶಿಯರಿಗೆ 30 ದಿನ ಅವಧಿಯ ವೀಸಾಗಾಗಿ 50 ಡಾಲರ್ ಶುಲ್ಕ ವಿಧಿಸುವ ಹಾಗೂ ಭಾರತ ಸೇರಿ ಏಳು ರಾಷ್ಟ್ರಗಳ ಪ್ರವಾಸಿಗರಿಗೆ ಶುಲ್ಕರಹಿತ ವೀಸಾ ನೀಡುವ ವ್ಯವಸ್ಥೆಯನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿಕೆಯು ಸ್ಪಷ್ಟಪಡಿಸಿದೆ.


Spread the love

About Laxminews 24x7

Check Also

ಗೌರಿ ಹುಣ್ಣಿಮೆಯಿಂದ ಛಟ್ಟಿ ಅಮವಾಸ್ಯೆವರೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್​ ವ್ಯವಸ್ಥೆ

Spread the love ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ