Breaking News

ಪೆನ್‌ಡ್ರೈವ್‌ ರೂವಾರಿ ಡಿಕೆ ಶಿವಕುಮಾರ್‌!.. ಬೆಂಗಳೂರಿನ ವಿವಿಧ ಕಡೆ ರಾತ್ರೋ ರಾತ್ರಿ DCM ಪೋಸ್ಟರ್!

Spread the love

ಬೆಂಗಳೂರು:- ಪ್ರಜ್ವಲ್ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಕೈವಾಡ ಇದೆ ಎಂಬ ವಕೀಲ ದೇವರಾಜೇಗೌಡ ಹೇಳಿಕೆ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

 

ಬೆಂಗಳೂರಿನ ವಿವಿಧ ಕಡೆ ರಾತ್ರೋ ರಾತ್ರಿ ಡಿಕೆ ಶಿವಕುಮಾರ್ ವಿರುದ್ಧದ ಪೋಸ್ಟರ್ ಗಳು ಕಂಡು ಬಂದಿದೆ.ಪೆನ್ ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಪಾತ್ರ ಇದೆ ಎಂಬ ದೇವರಾಜಗೌಡ ಹೇಳಿಕೆ ಹಿನ್ನಲೆ ಉಪ ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಪೋಸ್ಟರ್ ವಾರ್ ಶುರುವಾಗಿದೆ. ಲುಲು ಮಾಲ್, ಕೆಪಿಸಿಸಿ ಕಛೇರಿ ಸೇರಿದಂತೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ.

ಇನ್ನೂ ಪ್ರಕರಣದ ರೂವಾರಿ ಬೇರೆ ಯಾರೂ ಅಲ್ಲ ಒನ್ ಆಂಡ್ ಓನ್ಲಿ ಡಿಸಿಎಂ ಡಿಕೆ. ಶಿವಕುಮಾರ್ ಎಂದಿರುವ ವಕೀಲ ದೇವರಾಜೇಗೌಡ, ಡಿಕೆ ಶಿವಕುಮಾರ್ ಆಫರ್ ಕೊಟ್ಟರು ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆದರೆ ದೇವರಾಜೇಗೌಡ ಅರ್ಧಂಬರ್ಧ ಆಡಿಯೋ ಪ್ಲೇ ಮಾಡಿದ್ದು, ಫುಲ್ ಆಡಿಯೋ ಪ್ಲೇ ಮಾಡಲು ಆಗಲ್ಲ ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಪ್ಲೇ ಮಾಡಿದ ಆಡಿಯೋದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ‘ಹೇಳ್ರಿ ಏನು ವಿಚಾರ’ ಎನ್ನುವ ಮಾತಷ್ಟನ್ನೇ ಕೇಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಸ್‌ಐಟಿ ಅಧಿಕಾರಿ ಸುಮನ್ ಪೆನ್ನೇಕಾರ್ ಫೋಟೋ ತೋರಿಸಿದ ವಕೀಲ ದೇವರಾಜೇಗೌಡ, ಇವರು ನನ್ನ ಹೇಳಿಕೆಯಲ್ಲಿರುವ ಡಿಕೆ ಶಿವಕುಮಾರ್ ಅವರ ಹೆಸರನ್ನು ತೆಗೆಯಲು ಹೇಳಿದ್ದರು ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಟೀ ಕಪ್ ಹಿಡಿದುಕೊಂಡು ನಗುವ ಈ ವೈರಲ್ ಹುಡುಗ ಯಾರು?: ಆತ ಏನು ಕೆಲಸ ಮಾಡುತ್ತಿದ್ದಾನೆ?

Spread the loveಇತ್ತೀಚಿನ ದಿನಗಳಲ್ಲಿ ನೀವು ಇನ್ಸ್ಟಾಗ್ರಾಮ್ ಅಥವಾ ಯೂಟ್ಯೂಬ್ ರೀಲ್ಸ್ ನೋಡುವಾಗ ಕೈಯಲ್ಲಿ ಟೀ ಕಪ್ ಹಿಡಿದು ನಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ