Breaking News

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the love

ದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಅವರು ಅಲ್ಪ ಸಂಖ್ಯಾತರನ್ನು ಮುಗಿಸುತ್ತಾರೆ. ಫಸ್ಟ್ ಟೈಂ ಕ್ಯಾನ್ಸರ್ ಬಂದರೆ ಉಳಿಯುತ್ತಾರೆ, ಎರಡನೇ ಬಾರಿ ಬಂದರೂ ಉಳಿಯುತ್ತಾರೆ, ಆದರೆ ಮೂರನೇ ಬಾರಿ ಬಂದರೆ ನಮ್ಮನ್ನೆಲ್ಲರನ್ನೂ ತಗೊಂಡು ಹೋಗುತ್ತೆ ಎಂದು ಸಚಿವ ಜಮೀರ್ ಅಹ್ಮದ್‌ (Zameer Ahmed Khan) ಆರೋಪಿಸಿದ್ದಾರೆ.

ಬಾಗಲಕೋಟೆ ನಗರದಲ್ಲಿ ನಡೆದ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ಸಂಯುಕ್ತಾ, ಶಿವಾನಂದ ಪಾಟೀಲ್ ಪುತ್ರಿ ಅಲ್ಲ, ನನ್ನ‌ ಮಗಳ ಇದ್ದಂತೆ. ಈ ಎಲೆಕ್ಷನ್ ಶಿವಾನಂದ ಪಾಟೀಲ್‌ರದ್ದು ಅಲ್ಲ, ಜಮೀರ್‌ದು ಅಲ್ಲ, ಹಾಗೆಯೇ ಮೇಟಿ ಅವರದೂ ಅಲ್ಲ. ಈ ಬಾರಿ ದೇಶ ಬಚಾವ್ ಮಾಡಲು ಕಾಂಗ್ರೆಸ್‌ಗೆ ಮತ ಹಾಕಿ ಎಂದು ಕರೆ ನೀಡಿದರು.

ನಮ್ಮ ಆಡಳಿತದಲ್ಲಿ ಐದು ಅಂಶಗಳಿವೆ. ಎರಡು ಸಾವಿರ ರೂ., ಉಚಿತ ವಿದ್ಯುತ್, ಬಸ್ ಫ್ರಿ, ಅನ್ನಭಾಗ್ಯ, ಇದನ್ನೆಲ್ಲಾ ನಾವು ಮಾಡಿದ್ದೇವೆ. ನಮ್ಮ ಕೋಮಿನ 7 ಲಕ್ಷ ಜನ ಈ ಯೋಜನೆಗಳ ಉಪಯೋಗ ಪಡೆಯುತ್ತಿದ್ದಾರೆ. ರಾಹುಲ್ ಗಾಂಧಿ, ಖರ್ಗೆ ನಮ್ಮ ಸರ್ಕಾರ ಬಂದರೆ ಐದು ಯೋಜನೆ ಜಾರಿ ತರುತೀವೆ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಮಹಿಳೆಗೆ 1 ಲಕ್ಷ ಕೊಡುತ್ತಾರೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದೇವೆ. ನಮ್ಮ ಸರ್ಕಾರ ಬಂದಮೇಲೆ ಕೋರ್ಟ್‌ನಿಂದ ಡೈರೆಕ್ಷನ್ ತೆಗೆದುಕೊಳ್ಳಬೇಕು. ನಾಲ್ಕು ಜನ ಬಿಜೆಪಿ ಅವರನ್ನು ಕಳುಹಿಸಿಬಿಟ್ಟು ಪಾಕಿಸ್ತಾನ ಜಿಂದಾಬಾದ್ ಜೈಕಾರ ಹಾಕಿಸುತ್ತಾರೆ. ಅಂತಹವರನ್ನು ಪೊಲೀಸರಿಗೆ ಪರ್ಮಿಷನ್ ಕೊಟ್ಟರೆ ಅಲ್ಲೇ ಶೂಟ್ & ಸೈಟ್ ಆರ್ಡರ್ ಆಗಬೇಕು ಎಂದು ಸಚಿವ ಜಮೀರ್ ಅಹ್ಮದ್‌ ಹೇಳಿದರು.

ನಾವ್ಯಾರು (ಮುಸ್ಲಿಂರು) ದೇಶ ದ್ರೋಹಿಗಳಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಇಂಡಿಯಾ ಗೇಟ್‌ ಕಡೆ ಹೋಗಿ ನೋಡಿ ಲಿಸ್ಟ್ ಇದೆ. ಶೇ.60 ಮುಸ್ಲಿಂರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ದೇಶ ನಮ್ಮದು, ನಮ್ಮನ್ನು ಇಲ್ಲಿಗೆ ಕರೆಸಿದ ಉದ್ದೇಶ ಈ ಬಾರಿ ಶೇ.95 ವೋಟಿಂಗ್ ಆಗಲು . ಮೊದಲು ಎಲೆಕ್ಷನ್ ಡಬ್ಬಿ ಇತ್ತು, ಹೇಗೋ ನಡೆಯುತ್ತಿತ್ತು. ಈಗ ಇವಿಎಂ ಮಷಿನ್ ಇದೆ. ಯಾವ ಸಮುದಾಯ ಎಷ್ಟು ಮತದಾನ ಮಾಡಿದೆ ಎಂಬುವುದು ಗೊತ್ತಾಗುತ್ತೆ. ಹಾಗಾಗಿ ಮುಸ್ಲಿಂ ಮತಗಳು ಹೆಚ್ವಿನ ಸಂಖ್ಯೆಯಲ್ಲಿ ಬರಬೇಕು ಎಂದು ಸಮುದಾಯಕ್ಕೆ ಸಚಿವರು ಕರೆ ನೀಡಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ