Breaking News

ಸಾಲಗಾರನ ಪತ್ನಿಯ ಒತ್ತೆ ಇಟ್ಟುಕೊಂಡ ಬ್ಯಾಂಕ್

Spread the love

ಸೇಲಂ: ಸಾಲ ಕಟ್ಟದವನ ಪತ್ನಿಯನ್ನು ಬ್ಯಾಂಕ್ ಒತ್ತೆ ಇರಿಸಿಕೊಂಡ ಆಘಾತಕಾರಿ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.

ಸಂಜೆ ಆರು ಗಂಟೆಯ ನಂತರ ಸಾಲದ ಹಣ ಮರುಪಾವತಿಗೆ ಹಣಕಾಸು ಸಂಸ್ಥೆಗಳು ಒತ್ತಾಯಿಸುವಂತಿಲ್ಲ ಎನ್ನುವ ನಿಯಮಗಳ ಹೊರತಾಗಿಯೂ ಖಾಸಗಿ ಬ್ಯಾಂಕ್ ಸಿಬ್ಬಂದಿ ಸಾಲ ಮಾಡಿದ್ದ ಪತಿ ಕಂತಿನ ಹಣ ಪಾವತಿಸಿಲ್ಲವೆಂದು ಆತನ ಪತ್ನಿಯನ್ನು ಒತ್ತೆ ಇಟ್ಟುಕೊಂಡಿದ್ದಾರೆ.

ಸೇಲಂ ಜಿಲ್ಲೆಯ ವಳಪ್ಪಾಡಿಯ IDFC ಬ್ಯಾಂಕ್ ನಲ್ಲಿ ಸಿಬ್ಬಂದಿ ಈ ರೀತಿ ಮಾಡಿದ್ದಾರೆ. ಪ್ರಶಾಂತ್ ಎಂಬಾತ 35,000 ರೂ. ವೈಯಕ್ತಿಕ ಸಾಲ ಪಡೆದಿದ್ದು, ಸಾಲದ ಕಂತು ಪಾವತಿಸಲು ಇನ್ನೂ ಹತ್ತು ವಾರಗಳ ಅವಕಾಶವಿದ್ದರೂ ಏಪ್ರಿಲ್ 30 ರಂದು ಆತನ ಮನೆಗೆ ಬಂದ ಮಹಿಳಾ ಸಿಬ್ಬಂದಿ ಪ್ರಶಾಂತ್ ಪತ್ನಿ ಗೌರಿಶಂಕರಿ ಅವರನ್ನು ನೆಪ ಹೇಳಿ ಕರೆದುಕೊಂಡು ಹೋಗಿದ್ದು, ಸಾಲ ಪಾವತಿಸುವವರೆಗೂ ಬಿಡುವುದಿಲ್ಲ ಎಂದು ಒತ್ತೆ ಇಟ್ಟುಕೊಂಡಿದ್ದಾರೆ.

ಈ ವಿಷಯ ತಿಳಿದ ಪ್ರಶಾಂತ್ ಪೊಲೀಸರಿಗೆ ದೂರು ನೀಡಿದ್ದಾನೆ. ಹಣ ಹೊಂದಿಸಿಕೊಂಡು ಬಂದು ಜಿಲ್ಲಾ ಉಪ ಪೊಲೀಸ್ ಅಧೀಕ್ಷಕರ ಸಮ್ಮುಖದಲ್ಲಿ ವಾರದ ಕಂತಿನ ಹಣ 770 ರೂಪಾಯಿ ಪಾವತಿಸಿ ಪತ್ನಿಯನ್ನು ಬಿಡಿಸಿಕೊಂಡಿದ್ದಾನೆ.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ