ಕಲಬುರಗಿ, ಮೇ, 02: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಬರೀ ರಾಜ್ಯ ಅಲ್ಲದೆ, ದೇಶಾದ್ಯಂತ ಸಂಚಲ ಮೂಡಿಸಿದೆ. ಮತ್ತೊಂದೆಡೆ ಈಗಾಗಲೇ ಎಸ್‌ಐಟಿ ತಂಡ ವಿಚಾರಣೆಗೆ ಮುಂದಾಗಿದೆ. ಇನ್ನು ಮಾಜಿ ಸಚಿವ ರೇವಣ್ಣ ಅವರು ಇಂದು (ಮೇ 02) ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದರು.ಒಂದು ವೇಳೆ ವಿಚಾರಣಗೆ ಹಾಜರಾಗದಿದ್ದರೆ, ಅವರನ್ನು ಬಂಧಿಸಬೇಕಾಗುತ್ತದೆ ಎಂದು ಜಿ.ಪರಮೇಶ್ವರ್ ಕಲಬುರಗಿಯಲ್ಲಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಲ್ಲಿವರೆಗೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈಗಾಗಲೇ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳಿಗೂ ಕೂಡ ನೋಟಿಸ್ ಕಳುಹಿಸಲಾಗಿದೆ. ನಿನ್ನೆ ಮತ್ತೆ ಮತ್ತೊಬ್ಬ ಸಂತ್ರಸ್ತೆಯಿಂದ ಒಂದು ದೂರು ದಾಖಲಾಗಿದೆ. ಪ್ರಜ್ವಲ್ ರೆವಣ್ಣ ಅವರ ವಕೀಲರ ಮೂಲಕ 6 ದಿನ ಕಾಲಾವಕಾಶ ಕೇಳಿದ್ದಾರೆ. ಆದರೆ ಸಮಯ ಕೊಡಲು ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ನೋಟಿಸ್ ಜಾರಿ ಮಾಡಿದ ಬಳಿಕ ಕೂಡಲೇ ಬಂದು ಹಾಜರಾಗಬೇಕು. ಒಂದು ವೇಳೆ ಹಾಜರಾಗದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕಾಗುತ್ತದೆ. ಇನ್ನು ಮತ್ತೊಂದೆಡೆ ರೆವಣ್ಣ ಅವರು ಇಂದು ಅಧಿಕಾರಿಗಳ ಮುಂದೆ ಹಾಜರಾಗುತ್ತೆನೆ ಎಂದು ಹೇಳಿದ್ದಾರೆ. ಹಾಜರಾಗಲಿದ್ದರೆ ಬಂಧಿಸಬೇಕಾಗುತ್ತದೆ ಎಂದು ಖಡಕ್ ವಾರ್ನ್ ಮಾಡಿದ್ದಾರೆ.
ಎಸ್‍ಐಟಿ ನೋಟಿಸ್ ನೀಡಿದ್ದಾರೆ. ರೇವಣ್ಣ ಇಂದು ವಿಚಾರಣೆಗೆ ಹಾಜಾರಾಗುವುದಾಗಿ ಹೇಳಿದ್ದಾರೆ. ಇನ್ನು ಸಿಎಂ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಘಟನೆಯ ಬಗ್ಗೆ ವಿವರಿಸಿ, ಡಿಪ್ಲಾಮೆಟಿಕ್ ಪಾಸ್ ಪೋರ್ಟ್ ರದ್ದು ಮಾಡಿ ಆದಷ್ಟು ಬೇಗ ಕರೆದುಕೊಂಡು ಬರುವುದಕ್ಕೆ ಸಹಕರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ ಅಂತಾ ಹೇಳಿದರು.