Breaking News

ಬಿಸಿಲಿನಿಂದ ರಕ್ಷಣೆಗೆ ರಸ್ತೆ ತುಂಬ ಪ್ಲಾಸ್ಟಿಕ್ ಹೊದಿಕೆ

Spread the love

ಬಕವಿ ಬನಹಟ್ಟಿ: ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಿದ್ದರಿಂದ ಇಲ್ಲಿನ ಮಂಗಳವಾರ ಪೇಟೆಯಲ್ಲಿ ಹೂವಿನ ವ್ಯಾಪಾರಿಗಳು ಅವುಗಳ ರಕ್ಷಣೆಗಾಗಿ ಪ್ಲಾಸ್ಟಿಕ್‌ ಹೊದಿಕೆಗಳ ಮೊರೆ ಹೋಗಿದ್ದಾರೆ.

‘ಒಂದು ತಿಂಗಳಿಗಿಂತ ಹೆಚ್ಚು ಕಾಲ ಬಿಸಿಲಿನ ಬೇಗೆಯಿರುವುದರಿಂದ ಹೂ ಮತ್ತು ಹೂಮಾಲೆಗಳ ವ್ಯಾಪಾರ ಮಾಡುವುದು ಸಮಸ್ಯೆಯಾಗಿದೆ.

ಬಹಳಷ್ಟು ಹಾನಿಯನ್ನು ಕೂಡಾ ಅನುಭವಿಸುತ್ತಿದ್ದೇವೆ. ಅಧಿಕ ಬಿಸಿಲಿನ ಪ್ರಮಾಣದಿಂದಾಗಿ ಸಾಕಷ್ಟು ಹಾನಿಯನ್ನು ಕೂಡಾ ಅನುಭವಿಸುತ್ತಿದ್ದೇವೆ.

ಹೂ ಮಾಲೆಗಳು ಬಾಡುತ್ತಿವೆ. ಆದ್ದರಿಂದ ಅಂಗಡಿಗಳ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಿದ್ದೇವೆ. ದಾವಣಗೇರಿ ಮತ್ತು ಬೆಂಗಳೂರುಗಳಿಂದ ಹೂ ಮತ್ತು ಹೂಮಾಲೆಗಳನ್ನು ತರಿಸಿಕೊಳ್ಳುತ್ತಿದ್ಧೇವೆ’ ಎನ್ನುತ್ತಾರೆ ಇಲ್ಲಿನ ಹೂ ವ್ಯಾಪಾರಸ್ಥ ಮಹಾಂತೇಶ ಹೂಗಾರ.

 

ಹೂ ವ್ಯಾಪಾರಿಗಳು ಪ್ರಮುಖ ಬೀದಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದು ಸಾರ್ವಜನಿಕರಿಗೂ ಅನುಕೂಲವಾಗಿದೆ. ಇದರಿಂದ ಜನರು ಕೆಲ ಸಮಯ ನೆರಳಿಯಲ್ಲಿ ನಡೆದುಕೊಂಡು ಹೋಗುವಂತಾಗಿದೆ.


Spread the love

About Laxminews 24x7

Check Also

ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ; ಅಜೀತ್ ಸಿದ್ಧನ್ನವರ

Spread the love ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ