Breaking News

ಬಿಸಿಲ ತಾಪಕ್ಕೆ ಇಬ್ಬರು ಮಕ್ಕಳ ಸಾವು

Spread the love

ರಾಯಚೂರು, ಏ.28- ಬಿಸಿಲ ತಾಪಕ್ಕೆ ಬಸವಳಿದು ನಿತ್ರಾಣಗೊಂಡು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ನಡೆದಿದೆ.ರಣಬಿಸಿಲಿನ ತಾಪದಿಂದ ಹೈರಾಣಾಗಿರುವ ಜನರು ಮನೆಯಿಂದ ಹೊರಬರಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಸುಗೂರು ಗ್ರಾಮದಲ್ಲಿ ಹುಸೇನಮ್ಮ-ಮಾರುತಿ ದಂಪತಿಯ ಮಕ್ಕಳಾದ ಆರತಿ (9) ಮತ್ತು ಪ್ರಿಯಾಂಕಾ (7) ನಿತ್ರಾಣಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಮತ್ತೊಬ್ಬ ಪುತ್ರ ಲಕ್ಕಪ್ಪ (5)ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಯಚೂರಲ್ಲಿ ಬಿಸಿಲ ತಾಪಕ್ಕೆ ಇಬ್ಬರು ಮಕ್ಕಳ ಸಾವು

ಈ ನಡುವೆ ಕೆಲವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಕೃಷ್ಣಾನದಿಯ ನೀರು ಕುಡಿಯುತ್ತಿದ್ದ ಈ ಕುಟುಂಬದವರು ಅನಾರೋಗ್ಯಕ್ಕೀಡಾಗಿದ್ದರು ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಆದರೆ, ಬೇಸಿಗೆಯ ಬೇಗೆಗೆ ಇಬ್ಬರು ಮಕ್ಕಳು ಮೃತಪಟ್ಟಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ