Breaking News

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಜೀವ ಉಳಿಸಿ ದೇವರಾದ ವೋಟ್ ಮಾಡಲು ಬಂದ ಡಾಕ್ಟರ್

Spread the love

ಬೆಂಗಳೂರು: ಮತದಾನ ಮಾಡಲು ಬಂದಿದ್ದ ಮತದಾರರೊಬ್ಬರಿಗೆ ಹೃದಯಾಘಾತವಾಗಿದ್ದು (Cardiac arrest), ಈ ವೇಳೆ ಅಲ್ಲಿಯೇ ಇದ್ದ ವೈದ್ಯರು (Doctor) ಮಹಿಳೆಯ ಪ್ರಾಣ ಉಳಿಸಿದ್ದಾರೆ. ಜೆಪಿ ನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿ ಘಟನೆ ನಡೆದಿದೆ. ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ (Dr Ganesh Srinivas Prasad) ಅವರು ಸ್ಥಳದಲ್ಲಿ ಮಹಿಳೆಗೆ ಪ್ರಥಮ ಚಿಕಿತ್ಸೆ (CPR) ನೀಡಿ ಜೀವ ಉಳಿಸಿದ್ದಾರೆ.

ನಂತರ ಮಹಿಳೆಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 9 ಗಂಟೆಗೆ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಮತ ಹಾಕಲು ಜೆಪಿ ನಗರದ ಮತಗಟ್ಟೆ (Polling Booth) ತೆರಳಿದ್ದರು. ಸರತಿ ಸಾಲಿನಲ್ಲಿ ನಿಂತಾಗ ಸುಮಾರು 50 ವರ್ಷದ ಮಹಿಳೆ ನೀರು ಕುಡಿಯಲು ತೆರಳಿದಾಗ ಕುಸಿದು ಬಿದ್ದಿದ್ದಾರೆ. ಇದನ್ನು ನೋಡಿದ ಡಾಕ್ಟರ್ ಗಣೇಶ್ ಕೂಡಲೇ ಹೋಗಿ ಚಿಕಿತ್ಸೆ ನೀಡಿದ್ದಾರೆ.

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಜೀವ ಉಳಿಸಿ ದೇವರಾದ ವೋಟ್ ಮಾಡಲು ಬಂದ ಡಾಕ್ಟರ್

ಪತ್ರಿಕೆಯೊಂದರ ಜೊತೆ ಮಾತನಾಡಿದ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್, ನಾನು ಮಹಿಳೆಯ ಪಲ್ಸ್​ ಚೆಕ್ ಮಾಡಿದಾಗ ತುಂಬಾ ಇಳಿಕೆಯಾಗಿತ್ತು. ಮಹಿಳೆ ಕಣ್ಣುಗಳನ್ನು ಮುಚ್ಚುತ್ತಿದ್ದರು.

ಮಹಿಳೆ ಆರೋಗ್ಯದಲ್ಲಿ ಚೇತರಿಕೆ

ಮಹಿಳೆಯ ದೇಹ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆಕೆಯ ಉಸಿರಾಟದಲ್ಲಿ ಏರಳಿತ ಕಾಣಿಸುತ್ತಿತ್ತು. ನಾನು ಕೂಡಲೇ ಸಿಪಿಆರ್​ (Cardiopulmonary Resuscitation-CPR) ಚಿಕಿತ್ಸೆ ನೀಡಿದಾಗ ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು.

ಈ ವೇಳೆ ಅಲ್ಲಿದ್ದ ಚುನಾವಣಾಧಿಕಾರಿಗಳು ಮಹಿಳೆಗೆ ಜ್ಯೂಸ್ ವಿತರಿಸಿದರು. ಐದು ನಿಮಿಷದಲ್ಲಿಯೇ ಸ್ಥಳಕ್ಕೆ ಬಂದ ಅಂಬುಲೆನ್ಸ್​ನಲ್ಲಿ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಯ್ತು.

ಒಂದು ವೇಳೆ ಸ್ಪಲ್ಪ ತಡವಾಗಿದ್ರೂ ಮಹಿಳೆಯ ಜೀವಕ್ಕೆ ಅಪಾಯ ಇತ್ತು. ಆದ್ರೆ ಮತಗಟ್ಟೆಗೂ ಬಂದರೂ ಮಹಿಳೆಗೆ ಮತ ಹಾಕಲು ಸಾಧ್ಯವಾಗಿಲಿಲ್ಲ


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ