Breaking News

ಖಾಸಗೀಕರಣಕ್ಕೆ ಕೇಂದ್ರ ಹುನ್ನಾರ: ರಾಹುಲ್‌ ಗಾಂಧಿ ಆರೋಪ

Spread the love

ಹೊಸದಿಲ್ಲಿ: “ರೈಲ್ವೇ ಅಸಮರ್ಥ ಎಂದು ಬಿಂಬಿಸುವ ಮೂಲಕ ಖಾಸಗೀಕರಣ ಗೊಳಿಸಿ, ನಿರ್ವಹಣೆಯನ್ನು ತಮ್ಮ ಆಪ್ತರಿಗೆ ಮಾ ರಾಟ ಮಾಡುವ ಉದ್ದೇಶವನ್ನು ಮೋದಿ ಸರಕಾರ ಹೊಂದಿದೆ ಎಂದು ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ರೈಲಲ್ಲಿ ಜನ ತುಂಬಿ ತುಳುಕುತ್ತಿರುವ ವೀಡಿಯೋ ಒಂದನ್ನು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

“ಮೋದಿ ಆಡಳಿತದಲ್ಲಿ ರೈಲಿನಲ್ಲಿ ಓಡಾಡುವುದು ಜನರಿಗೆ ಶಿಕ್ಷೆಯಂತಾಗಿದೆ. ಐಷಾರಾಮಿ ರೈಲುಗಳ ಪ್ರಚಾರ ಮಾಡುತ್ತಾ, ಸಾಮಾನ್ಯ ಕೋಚ್‌ಗಳನ್ನು ಕೇಂದ್ರ ಕಬಳಿಸುತ್ತಿದೆ. ಇದನ್ನು ಉಳಿಸಬೇಕಾದರೆ ಮೋದಿ ಸರಕಾರವನ್ನು ಕೆಳಗಿಳಿಸಲೇ ಬೇಕಿದೆ’ ಎಂದಿದ್ದಾರೆ.

Railway ಖಾಸಗೀಕರಣಕ್ಕೆ ಕೇಂದ್ರ ಹುನ್ನಾರ: ರಾಹುಲ್‌ ಗಾಂಧಿ ಆರೋಪ

ಪ್ರಯಾಣಿಕ ಮತ್ತು ರೈಲ್ವೇ ನಡುವೆ ಟ್ವೀಟ್‌ ಸಮರ
ಕಪಿಲ್‌ ಎಂಬವರು 2 ಕ್ಲಾಸ್‌ ಎಸಿ ಕೋಚ್‌ನಲ್ಲೂ ಜನರು ನಿಂತು ಪ್ರಯಾಣಿಸುತ್ತಿರುವ ವೀಡಿಯೋ ವನ್ನು ಜಾಲತಾಣದಲ್ಲಿ ಹಂಚಿಕೊಂಡಿ ದ್ದರು. ಈ ಬಗ್ಗೆ ಪತ್ರಿಕ್ರಿಯಿಸಿರುವ ರೈಲ್ವೇ, ತಪ್ಪು ಮಾಹಿತಿ ನೀಡಬೇಡಿ ಎಂದಿತ್ತು. ಇದರಿಂದ ಸಿಟ್ಟಿಗೆದ್ದ ಕಪಿಲ್‌, ಇದು ತಪ್ಪು ಮಾಹಿತಿ ಅಲ್ಲ, ಎ.14ರಂದು ನಡೆದ ನಿಜವಾದ ಚಿತ್ರಣ. ನಮ್ಮನ್ನು ಬೆದರಿಸಿ ನೀವು ಸತ್ಯ ಮುಚ್ಚಿಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.


Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ