Breaking News

ಅಳಿಯ, ಮಗ, ಮೊಮ್ಮಗ ಮೂವರು ಸೋಲ್ತಾರೆ – ಇದು ಡಿಕೆಶಿ ಭವಿಷ್ಯ

Spread the love

ಮೈಸೂರು : ಈ ಲೋಕಸಭಾ ಚುನಾವಣೆಯಲ್ಲಿ ದೇವೆಗೌಡರ(Devegowda) ಅಳಿಯ, ಮಗ, ಮೊಮ್ಮಗ ಮೂವರು ಸೋಲ್ತಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌(D K Shivakumar) ವೇದಿಕೆ ಮೇಲೆ ಭವಿಷ್ಯ ನುಡಿದಿದ್ದಾರೆ.

ಮೈಸೂರಿನಲ್ಲಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಎಂ ಲಕ್ಷ್ಮಣ್ ಪರ ಪ್ರಚಾರ ನಡೆಸಿ ಮಾತನಾಡಿದ ಡಿ ಕೆ ಶಿವಕುಮಾರ್ , ಹೆಚ್‌ಡಿಡಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

D K SHIVAKUMAR : ಅಳಿಯ, ಮಗ, ಮೊಮ್ಮಗ ಮೂವರು ಸೋಲ್ತಾರೆ - ಇದು ಡಿಕೆಶಿ ಭವಿಷ್ಯ

ರಾಮನಗರದಲ್ಲಿ ಅಳಿಯನನ್ನ ಬಿಜೆಪಿಯಿಂದ ನಿಲ್ಲಿಸಿ ಮಂಡ್ಯದಲ್ಲಿ ಕುಮಾರಸ್ವಾಮಿ ನಿಂತಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ? ಪಕ್ಷದ ಕಾರ್ಯಕರ್ತರಿಗೆ ಅಲ್ಲಿ ಉಳಿಗಾಲವಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ನಾನು ನಿಖಿಲ್ ಗೆ ಸಪೋರ್ಟ್ ಮಾಡಿದ್ದೆ ಆದರೆ ಜನ ಅವರನ್ನು ಒಪ್ಪಲಿಲ್ಲ. ಕುಮಾರಸ್ವಾಮಿ ತೆನೆ‌ಹೊತ್ತ ಮಹಿಳೆ ಬಿಸಾಡಿ ಬಿಜೆಪಿ ಜೊತೆಗೆ ಸೇರಿ ಬಿಟ್ಟಿದ್ದಾರೆ .ಕುಮಾರಸ್ವಾಮಿ ನೀನು ರೈತರ ಪರ ಇಲ್ಲ, ನಿನ್ನದು‌ ಕೇವಲ ಬುಡುಬುಡಕೆ ಖಾಲಿ‌ ಮಾತು ಎಂದು ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಅಲ್ಲಮ ಪ್ರಭು ವಚನ ಹೇಳಿ ಹೆಚ್‌ಡಿಕೆ ಟೀಕಿಸಿದ ಡಿಕೆಶಿ

ಕೊಟ್ಟ ಕುದುರೆಯನೇರಲರಿಯದವನು ಮತ್ತೊಂದು ಕುರೆಯನೇರ ಬಯಸುವವನು ನೀರನೂ ಅಲ್ಲ ಶೂರನೂ ಅಲ್ಲ ಎಂಬ ವಚನ ಹೇಳುವ ಮೂಲಕ ಹೆಚ್‌ಡಿಕೆಯನ್ನು ಡಿಕೆಶಿ ಟೀಕಿಸಿದ್ದಾರೆ. 2018ರಲ್ಲಿ ಹೆಚ್‌ಡಿಕೆ ಸಿಎಂ ಆಗಿದ್ದಾಗ ಅವರ ಬೆಂಬಲಕ್ಕೆ ಎರಡು ಜಿಲ್ಲೆಗಳಿಂದ ಮೂರು ಎಂಎಲ್‌ಸಿ , ಮೂರು ಶಾಸಕರು ಡಿಸಿ ತಮ್ಮಣ್ಣ , ಪುಟ್ಟರಾಜು ಮತ್ತು ಸಾರಾ ಮಹೇಶ್‌ ಇದ್ದರೂ ಆದರೂ ಅವರಿಂದ ಮೈಸೂರು ಮಂಡ್ಯ ಭಾಗಕ್ಕೆ ಒಂದು ನೀರಾವರಿ ಯೋಜನೆಯನ್ನೂ ತಂದಿಲ್ಲ. ಕಾಂಗ್ರೆಸ್‌ ನೆರವಿನಿಂದ ಪ್ರಧಾನಿಯಾದ ದೇವೆಗೌಡರೂ ಈ ಪ್ರದೇಶಕ್ಕೆ ಏನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ