Breaking News

ಲವ್ ಜಿಹಾದ್ ಅನ್ನೋದು ನಿರಂತರವಾಗಿ ನಡೆಯುತ್ತಿದೆ ಎಂದು ಶೆಟ್ಟರ್ ವಾಗ್ದಾಳಿ

Spread the love

ಬೆಳಗಾವಿ: ಲವ್ ಜಿಹಾದ್ ಹೆಸರಲ್ಲಿ ಒಂದು ಗುಂಪಿಗೆ ತರಬೇತಿ ಕೊಟ್ಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.

ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ನಡೆದ ಪ್ರತಿಭಟನೆ ಯಲ್ಲಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಘಟನೆ ರಾಕ್ಷಸಿ ಪ್ರವೃತ್ತಿಯದ್ದು, ಹಾಡಹಗಲೇ ಕಾಲೇಜಿನಲ್ಲಿ ಚಾಕುವಿನಿಂದ ಇರಿದು ವಿದ್ಯಾರ್ಥಿನಿಯನ್ನು ಕೊಂದು ಹಾಕಿದ್ದನ್ನು ಎಲ್ಲರೂ ಖಂಡಿಸಬೇಕು.ಎನ್‌ಐಎ ಮೂಲಕ ತನಿಖೆ ಮಾಡಿ ಮತಾಂತರ ಗುಂಪನ್ನು ಬಯಲಿಗೆಳೆಯುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಎನ್‌ಐಎ ಸಹ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿ ಇಲ್ಲ ಇನ್ನೂ ಐದು ಜನ ಆರೋಪಿಗಳಿದ್ದಾರೆ. ಆ ಎಲ್ಲ ಆರೋಪಿಗಳನ್ನು ಕಾಂಗ್ರೆಸ್ ಸರ್ಕಾರ ಯಾವಾಗ ಅರೆಸ್ಟ್ ಮಾಡುತ್ತದೆ ಎಂದು ಸವಾಲು ಹಾಕಿದರು.

ದೆಹಲಿಯಲ್ಲಿ ಇದೇ ರೀತಿ ಘಟನೆ ನಡೆದಿತ್ತು, ಈಗ ಹುಬ್ಬಳ್ಳಿಯಲ್ಲಿ ನಡೆದಿದೆ. ಇಂಥದೊಂದು ಗುಂಪಿಗೆ ತರಬೇತಿ ನೀಡಲಾಗಿದೆಯಾ ಅನ್ನೋ ಅನುಮಾನ ಮೂಡುತ್ತಿದೆ.‌ಇದುವರೆಗೂ ಸಿಎಂ, ಡಿಸಿಎಂ, ಗೃಹಸಚಿವರು ಬಂದು ಯುವತಿ ಕುಟುಂಬಕ್ಕೆ ಸಾಂತ್ವನ ಏಕೆ ಹೇಳಿಲ್ಲ. ಅದೇ ಮುಸ್ಲಿಂ ಮಹಿಳೆಗೆ ಈ ರೀತಿ ಆಗಿದ್ದರೆ ವಿಶೇಷ ವಿಮಾನ ತಗೊಂಡು ಬರುತ್ತಿದ್ದರು. ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲು ನಿಮಗೆ ಗಡ್ಸ್ ಇಲ್ವಾ ಎಂದು ಕಿಡಿ ಕಾರಿದರು.

ನಿಮ್ಮ ತುಷ್ಟಿಕರಣ ನೀತಿ ನಿಲ್ಲಿಸಿ, ಇಲ್ಲ ಜನ ನಿಮ್ಮನ್ನು ಅಟ್ಟಾಡಿಸಿ ಹೊಡೆಯುವ ಪರಿಸ್ಥಿತಿ ಬರುತ್ತದೆ. ಕೇರಳದ ವಯನಾಡ್ ನಲ್ಲಿ ಮುಸ್ಲಿಮರು ಜಾಸ್ತಿ ಇರೋದಕ್ಕೆ ಅಲ್ಲಿಗೆ ಹೋಗಿ ರಾಹುಲ್ ಗಾಂಧಿ ಚುನಾವಣೆ ಸ್ಪರ್ಧೆ ಮಾಡುತ್ತಾರೆ. ರಾಜ್ಯದಲ್ಲಿ ಮಹಿಳೆಯರು ಸ್ಕೂಲ್, ಕಾಲೇಜಿಗೆ ಹೋಗುವ ಪರಿಸ್ಥಿತಿ ಉಳಿದಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ ಎಂದು ಕಿಡಿ ಕಾರಿದರು.

ಇನ್ನಳಿದ ಐದು ಜನರನ್ನು ಅರೆಸ್ಟ್ ಮಾಡಿ ಎನ್ಕೌಂಟರ್ ಮಾಡುವ ಕೆಲಸ ಮಾಡಿ. ಯಾವಾಗ ಕಾಂಗ್ರೆಸ್ ಸರ್ಕಾರ ಬರುತ್ತೆ, ಆಗ ಹಿಂದು ಸಮಾಜಕ್ಕೆ ತೊಂದರೆ ಕೊಡುವ ಕೆಲಸ ನಡೆದಿದೆ. ಲವ್ ಜಿಹಾದ್ ಅನ್ನೋದು ನಿರಂತರವಾಗಿ ನಡೆಯುತ್ತಿದೆ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.‌


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ