Breaking News

ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Spread the love

ಪಾವಗಡ: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಮದ್ರೇನಹಳ್ಳಿ ‌ಅರಣ್ಯ ಪ್ರದೆಶದ ಬಳಿ ನಡೆದಿದೆ.

ತಾಲೂಕಿನ ಬೆಳ್ಳಿಬಟ್ಟಲ ಗ್ರಾಮದ ಗ್ರಾ.ಪಂ.ಸದಸ್ಯ ಕೃಷ್ಣಪ್ಪ ಮೃತಪಟ್ಟವರು.

ಕೃಷ್ಣಪ್ಪ ಹಾಗೂ ಹೆಂಡತಿ ಗುಂಡಮ್ಮ ಏ.17 ಬುಧವಾರ ರಾತ್ರಿ 9 ಗಂಟೆಗೆ ತಾಲೂಕಿನ ಅಚ್ಚಮ್ಮನಹಳ್ಳಿ ಗ್ರಾಮದಿಂದ ತಮ್ಮ ಸ್ವಗ್ರಾಮ ಬೆಳ್ಳಿ ಬಟ್ಟಲುಗೆ ಹೋಗುವಾಗ ಶೈಲಾಪುರ ಮತ್ತು‌ಕೊಟಗುಡ್ಡ ಗ್ರಾಮಗಳ ‌ಮಧ್ಯೆ ಮದ್ರೇನಹಳ್ಳಿ ಎಂಬ ‌ಅರಣ್ಯ ಪ್ರದೆಶದ ಬಳಿ‌ ಆಕಸ್ಮಿಕವಾಗಿ ಬೈಕ್ ಗೆ ಕಾಡು ಹಂದಿಗಳು ‌ನಗ್ಗಿದೆ.

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

ಈ ಪರಿಣಾಮ ಇಬ್ಬರೂ ಬೈಕ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅದೇ ರಸ್ತೆಯಲ್ಲಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಹೋಗುತ್ತಿದ್ದಾಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ವಾಹನ ನಿಲ್ಲಿಸಿ ತಕ್ಷಣ ಅಂಬುಲೆನ್ಸ್ ಗೆ ಕರೆ ಮಾಡಿ ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣಪ್ಪ ಮೃತಪಟ್ಟಿದ್ದಾರೆ.

ಮೃತ ಕೃಷ್ಣಪ್ಪ ಹೆಂಡತಿ, ಎರಡು ಹೆಣ್ಣುಮಕ್ಕಳು, ಒಂದು ಗಂಡು ಮಗುವನ್ನು ಅಗಲಿದ್ದಾರೆ.


Spread the love

About Laxminews 24x7

Check Also

ಖಾಲಿ ಗ್ಯಾಸ್ ಸಿಲಿಂಡರ್ ದಾಸ್ತಾನು ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು 409 ಗ್ಯಾಸ್​ ಸಿಲಿಂಡರ್​ಗಳನ್ನು ಜಪ್ತಿ ಮಾಡಿದ್ದಾರೆ.

Spread the loveಹುಬ್ಬಳ್ಳಿ: ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ರಿಫಿಲಿಂಗ್ ನಗರಕ್ಕೂ ವ್ಯಾಪಿಸಿದ್ದು, ಇದೀಗ ಖಚಿತ ಮಾಹಿತಿ ಮೇರೆಗೆ ಹಳೇ ಹುಬ್ಬಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ