Breaking News

ಚಿಕ್ಕೋಡಿ ಲೋಕಸಭಾ ಕ್ಷೇತ್ರ | ತಿಂಗಳಲ್ಲಿ 79 ಪ್ರಕರಣ:₹1.17 ಕೋಟಿ ವಶ

Spread the love

ಚಿಕ್ಕೋಡಿ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್‌ 16ರಿಂದ ಏಪ್ರಿಲ್ 16ರವರೆಗೆ ₹1.17 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ್‌ ಶಿಂಧೆ ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳು ₹ 1.17 ನಗದು, ₹ 7.05 ಲಕ್ಷ ಮೌಲ್ಯದ 1948.151 ಲೀಟರ್‌ ಮದ್ಯ, ₹ 2.21 ಲಕ್ಷ ಮೌಲ್ಯದ 8.813 ಕೆ.ಜಿ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ | ತಿಂಗಳಲ್ಲಿ 79 ಪ್ರಕರಣ:₹1.17 ಕೋಟಿ ವಶ

ಮಾದಕ, ಅಮಲು ಪದಾರ್ಥಗಳು ಹಾಗೂ ₹ 9.88 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ವಿವಿಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಒಟ್ಟು 79 ಪ್ರಕರಣಗಳನ್ನು ದಾಖಲಿಸಲಾಗಿದೆ.

ಸಹಾಯವಾಣಿ: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಈ ಕೆಳಕಂಡಂತೆ ಸಹಾಯವಾಣಿಗಳನ್ನು ತೆರೆಯಲಾಗಿದೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ- 08338 272132, 272130, ನಿಪ್ಪಾಣಿ- 08338 220030, ಚಿಕೋಡಿ- ಸದಲಗಾ- 08338 272130, ಅಥಣಿ- 08289 469501, ಕಾಗವಾಡ- 08339 264555, ಕುಡಚಿ- 9845986105, ರಾಯಬಾಗ- 8867519106, ಹುಕ್ಕೇರಿ- 08333-265036, ಯಮಕನಮರಡಿ-08333 200308 ಹಾಗೂ ಚುನಾವಣಾ ಸಹಾಯವಾಣಿ 1950ಗೆ ಸಾರ್ವಜನಿಕರು ಕರೆ ಮಾಡಿ ಚುನಾವಣೆಗೆ ಸಂಬಂಧಿತ ಮಾಹಿತಿ ಹಾಗೂ ದೂರುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ