Breaking News

ಪ್ರಲ್ಹಾದ ಜೋಶಿಗೆ ಸ್ವಂತ ವಾಹನ ಇಲ್ಲ: ₹ 13.97 ಕೋಟಿ ಮೌಲ್ಯದ ಆಸ್ತಿ ಒಡೆಯ

Spread the love

ಧಾರವಾಡ: ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಐದನೇ ಬಾರಿಗೆ ಸ್ಪರ್ಧಿಸಿರುವ ಸಚಿವ ಪ್ರಲ್ಹಾದ ಜೋಶಿ ಅವರು ₹ 13.97 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸತತ ನಾಲ್ಕು ಬಾರಿ ಆಯ್ಕೆಯಾಗಿರುವ ಅವರಿಗೆ ಸ್ವಂತ ವಾಹನ ಇಲ್ಲ. ಜೋಶಿ ಅವರ ಬಳಿ 184 ಗ್ರಾಂ ಚಿನ್ನ 5 ಕೆ.ಜಿ ಬೆಳ್ಳಿ, ಅವರ ಪತ್ನಿ ಬಳಿ 500 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಇದೆ.

ಪ್ರಲ್ಹಾದ ಜೋಶಿಗೆ ಸ್ವಂತ ವಾಹನ ಇಲ್ಲ: ₹ 13.97 ಕೋಟಿ ಮೌಲ್ಯದ ಆಸ್ತಿ ಒಡೆಯ

ಜೋಶಿ ಅವರ ಹೆಸರಿನಲ್ಲಿ ₹ 6.63 ಕೋಟಿ ಹಾಗೂ ಪತ್ನಿ ಹೆಸರಿನಲ್ಲಿ₹1.37 ಕೋಟಿ ಸಾಲ ಇದೆ. ಪತ್ನಿ ಜ್ಯೋತಿ ಅವರ ಒಟ್ಟು ಆಸ್ತಿಯ ಮೌಲ್ಯ ₹ 6.80 ಕೋಟಿ ಎಂದು ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ವಿವರ ಘೋಷಿಸಿಕೊಂಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಜೋಶಿ ಅವರ ಒಟ್ಟು ಆಸ್ತಿ ಮೌಲ್ಯ ₹10.34 ಕೋಟಿ ಘೋಷಿಸಿಕೊಂಡಿದ್ದರು, ಈ ಸ್ಥಿರಾಸ್ತಿ ಮೌಲ್ಯ₹ 8.09 ಕೋಟಿ ಇತ್ತು, ಈ ಬಾರಿ ಸ್ಥಿರಾಸ್ತಿ ಮೌಲ್ಯ ₹ 11.24 ಕೋಟಿ ಘೋಷಿಸಿಕೊಂಡಿದ್ದಾರೆ. ಕಳೆದ ಬಾರಿ ಪತ್ನಿ ಜ್ಯೋತಿ ಅವರ ಚರಾಸ್ತಿ ಮೌಲ್ಯ ₹ 27 ಲಕ್ಷ ಘೋಷಿಸಿಕೊಂಡಿದ್ದರು, ಈ ಬಾರಿ ₹ 5.93 ಕೋಟಿ ಘೋಷಿಸಿಕೊಂಡಿದ್ದಾರೆ. ಹಿಂದಿನ ಬಾರಿ ಜೋಶಿ ಅವರು ₹ 5.15 ಕೋಟಿ ಸಾಲ ಹಾಗೂ ಪತ್ನಿ ಹೆಸರಿನಲ್ಲಿ ₹2ಲಕ್ಷ ಸಾಲ ಘೋಷಿಸಿಕೊಂಡಿದ್ದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ