ಕುಂಸಿ: ಸಿಡಿಲು ಬಡಿದು 18 ಕುರಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮೀಪದ ಆಯನೂರು ಕೋಟೆಯಲ್ಲಿ ಶುಕ್ರವಾರ ನಡೆದಿದೆ.
ಸಂಜೆ ಸಾಧಾರಣ ಮಳೆಯಾಗುತ್ತಿತ್ತು. ನಂತರ ಬಡಿದ ಸಿಡಿಲಿಗೆ 18 ಕುರಿಗಳು ಬಲಿಯಾಗಿವೆ.
ಮಾಲೀಕ ಝಾಕಿರ್ ಹುಸೇನ್ ಅವರು ಕುರಿಗಳನ್ನು ಮೇಯಿಸಲು ಮಕ್ಕಳೊಂದಿಗೆ ಆಯನೂರು ಕೋಟೆ ಪಕ್ಕದ ಬಯಲಿಗೆ ಹೊಡೆದುಕೊಂಡು ಹೋಗಿದ್ದರು.ಸಾಧಾರಣ ಮಳೆಯ ನಂತರ ಆಕಸ್ಮಿಕವಾಗಿ ಬಡಿದ ಸಿಡಿಲಿಗೆ ಹದಿನೆಂಟು ಕುರಿಗಳು ಬಲಿಯಾಗಿವೆ.

ಝಾಕಿರ್ ಅವರ ಕುಟುಂಬ ಕುರಿ ಮಾರಾಟದಿಂದಲೇ ಜೀವನ ನಡೆಸುತ್ತಿತ್ತು. ಪಶುಸಂಗೋಪನಾ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಗ್ರಾಮದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿದರು.
Laxmi News 24×7